HOME » NEWS » State » DAKSHINA KANNADA MUSLIM BOY RAMLAN WINS HINDU HEART BY SINGING GODDESS KALIKAMBE KKM SESR

ಭಕ್ತಿಗೆ ಧರ್ಮದ ಹಂಗಿಲ್ಲ; ಕಾಳಿಕಾಂಬೆ ಸ್ತುತಿಸಿ ಹಿಂದೂಗಳ ಹೃದಯ ಗೆದ್ದ ಮುಸ್ಲಿಂ ಯುವಕ

ಅನ್ಯ ಧರ್ಮೀಯನಾದರೂ ಸ್ವ ಧರ್ಮ ಪ್ರೇಮದ ಜೊತೆ ಅನ್ಯ ಧರ್ಮದ ದೇವರನ್ನು ಗೌರವಿಸಿ, ಆರಾಧಿಸುವ ರಮ್ಲಾನ್ ಆತ್ಮಶುದ್ಧತೆಯ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ

news18-kannada
Updated:April 15, 2021, 9:26 PM IST
ಭಕ್ತಿಗೆ ಧರ್ಮದ ಹಂಗಿಲ್ಲ; ಕಾಳಿಕಾಂಬೆ ಸ್ತುತಿಸಿ ಹಿಂದೂಗಳ ಹೃದಯ ಗೆದ್ದ ಮುಸ್ಲಿಂ ಯುವಕ
ರಮ್ಲಾನ್
  • Share this:
ಮಂಗಳೂರು (ಏ. 15): ದಕ್ಷಿಣ ಕನ್ನಡ ಜಿಲ್ಲೆ ಹೇಗೆ ವಿಶಿಷ್ಠ ಆಚರಣೆ ಸಂಪ್ರದಾಯಕ್ಕೆ ಹೆಸರು ಪಡೆದಿದೆಯೋ ಅದೇ ರೀತಿ ಕೋಮು ದಳ್ಳುರಿಯಂತಹ ಘಟನೆಗಳಿಂದಲೂ ಸದ್ದು ಮಾಡುತ್ತದೆ. ಅಂತಹ ಪ್ರದೇಶದಲ್ಲಿ ಈ ಹುಡುಗ ಭಾವೈಕ್ಯತೆಯ ಸಂಗಮವಾಗಿ ಮಾದರಿಯಾಗಿದ್ದಾನೆ.  ಬೆಳ್ತಂಗಡಿ ತಾಲೂಕಿನ‌ ಸವಣಾಲು ಗ್ರಾಮ ಈಗ ಹಿಂದೂ ಮುಸ್ಲಿಂಗಳ ಭಾವೈಕತ್ಯೆ ಕೇಂದ್ರವಾಗಿದ್ದು, ಎಲ್ಲರ ಆಕರ್ಷಣೆ ಪಡೆದಿದೆ. ಇಲ್ಲಿನ ಕುದುರೆಮುಖ ಪರ್ವತ ಶ್ರೇಣಿಗಳ ತಪ್ಪಲಿನಲ್ಲಿರುವ ಸವಣಾಲಿನ ಇತಿಹಾಸ ಪ್ರಸಿದ್ಧ ಕಾಳಿಕಾಬೆಟ್ಟದ ಶ್ರೀ ದುರ್ಗಾ ಕಾಳಿಕಾಂಬ ಕ್ಷೇತ್ರದಲ್ಲಿ ಸಾಮರಸ್ಯದ ಹೂವು ಅರಳಿದೆ. ಕ್ಷೇತ್ರದ ರಮ್ಲಾನ್ ಎಂಬ ಮುಸ್ಲಿಂ ಯುವಕ ಕಾಳಿಕಾಮಾತೆಗಾಗಿ ಹಾಡನ್ನು ರಚಿಸಿ, ಗಾಯನ ಮಾಡಿ ಕಾಳಿಕಾಂಬೆಗೆ ಅರ್ಪಣೆ ಮಾಡಿದ್ದಾರೆ.

ರಮ್ಲಾನ್ ಕಾಳಿಕಾಂಬ ದೇಗುಲದ ಪಕ್ಕದಲ್ಲೇ ವಾಸವಾಗಿದ್ದು, ಕಾಳಿಕಾಮಾತೆಯ ಪರಮ ಭಕ್ತನಾಗಿದ್ದಾರೆ. ಶ್ರೀ ದುರ್ಗಾ ಕಾಳಿಕಾಂಬ ಕ್ಷೇತ್ರದ ಪ್ರತಿಯೊಂದು ಕಾರ್ಯಕ್ರಮದಲ್ಲೂ ಶ್ರದ್ಧಾ ಭಕ್ತಿಯಿಂದ ಭಾಗವಹಿಸಿ ಸಾಮರಸ್ಯ ಮೆರೆದಿದ್ದಾರೆ. ‌ಮುಸ್ಲಿಂನಾದರೂ ದುರ್ಗೆಯ ಆರಾಧನೆಯನ್ನು ಮುಕ್ತ ಮನಸ್ಸಿನಿಂದ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮಹಿಮೆದ ಕಾರಣಿಕ ಕ್ಷೇತ್ರ ಕಾಳಿಕಾಬೆಟ್ಟ ಎಂಬ ಭಕ್ತಿಗೀತೆಯನ್ನು ರಮ್ಲಾನ್ ಹಾಡಿದ್ದಾರೆ. ಎಲೆಕ್ಟ್ರಿಷಿಯನ್​ ಆಗಿ ಕೆಲಸ ಮಾಡುತ್ತಿರುವ ರಮ್ಲಾನ್ ದುರ್ಗೆಯ ಬಗ್ಗೆ ಹಾಡನ್ನು ರಚಿಸಿ ಸ್ವ ಗಾಯನವನ್ನು ಮಾಡಿದ್ದಾರೆ. ರಮ್ಲಾನ್ ಶುಶ್ರಾವ್ಯ ಕಂಠದಿಂದ ದುರ್ಗೆಯ ಹಾಡು ಅದ್ಭುತವಾಗಿ ಮೂಡಿ ಬಂದಿದೆ. ರಮ್ಲಾನ್ ಹಾಡನ್ನು ಸವಣಾಲು ಕಾಳಿಕಾಬೆಟ್ಟ ಶ್ರೀ ಕಾಳಿಕಾಂಬ ದೇವಸ್ಥಾನ ಎಂಬ ಯೂಟ್ಯೂಬ್ ಪೇಜ್ ನಲ್ಲಿ ನೋಡಬಹುದಾಗಿದೆ.

ರಮ್ಲಾನ್ ಹಾಡು ಕ್ಷೇತ್ರದ ಭಕ್ತರಿಗೆ ತುಂಬಾ ಖುಷಿ ಕೊಟ್ಟಿದೆ. ಹಾಡು ಹಾಡಿದ ರಮ್ಲಾನ್ ಕ್ಷೇತ್ರದಿಂದ ವಿಶೇಷ ಮೆಚ್ಚುಗೆ ವ್ಯಕ್ತವಾಗಿದೆ. ‌ಅನ್ಯ ಧರ್ಮೀಯನಾದರೂ ಸ್ವ ಧರ್ಮ ಪ್ರೇಮದ ಜೊತೆ ಅನ್ಯ ಧರ್ಮದ ದೇವರನ್ನು ಗೌರವಿಸಿ, ಆರಾಧಿಸುವ ರಮ್ಲಾನ್ ಆತ್ಮಶುದ್ಧತೆಯ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ. ಸವಣಾಲಿನ ಕಾಳಿಕಾ ಮತೆ ಅತೀ ಕಾರಣಿಕ ಶಕ್ತಿಯಾಗಿದ್ದು,ಬೆಂಗಳೂರು, ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಈ ಕ್ಷೇತ್ರಕ್ಕೆ ಬರುತ್ತಾರೆ.

ಇದನ್ನು ಓದಿ: ಮಹದೇಶ್ವರ ಬೆಟ್ಟಕ್ಕೆ ತಿರುಪತಿ ಮಾದರಿಯಲ್ಲಿ ಮೆಟ್ಟಿಲು ನಿರ್ಮಾಣ ಯೋಜನೆಗೆ ಚಾಲನೆ

ಕ್ಷೇತ್ರದಲ್ಲಿ ನವರಾತ್ರಿ ಉತ್ಸವ ಅತೀ ವಿಜೃಂಭಣೆಯಿಂದ ನಡೆಯುತ್ತಿದ್ದು,ಈ ವೇಳೆ ರಮ್ಲಾನ್​​ ಎಲ್ಲಾ ದಿನಗಳಲ್ಲೂ ಕ್ಷೇತ್ರದ ಭಕ್ತರು ಭಾಗವಹಿಸುವಂತೆ ಭಾಗವಹಿಸುತ್ತಾರೆ. ರಮ್ಲಾನ್ ಗೆ ಕಾಳಿಕಾಂಬೆಯ ಮೇಲಿರುವ ಪ್ರೀತಿ ಸ್ವತಃ ಗ್ರಾಮಸ್ಥರನ್ನೇ ಅಚ್ಚರಿಗೊಳಿಸಿದೆ. ರಮ್ಲಾನ್ ಕಾಳಿಕಾಮಾತೆಯ ಕುರಿತು ಹಾಡು ರಚಿಸಿ ಹಾಡಬೇಕೆಂಬ ಆಕಾಂಕ್ಷೆ ವ್ಯಕ್ತಪಡಿಸಿದಾಗ ಆತನ ಗೆಳೆಯರು ಮುಕ್ತ ಮನಸ್ಸಿನಿಂದ ಸಹಕಾರ ನೀಡಿ ಹಾಡಲು ಪ್ರೋತ್ಸಾಹಿಸಿದ್ದು,  ಮುಂದೆಯೂ ಸಹಕಾರ ನೀಡುವುದಾಗಿ ಹೇಳಿದ್ದಾರೆ.

ಸವಣಾಲಿನ ಶ್ರೀ ಕಾಳಿಕಾಂಬ ಕ್ಷೇತ್ರ 1200 ವರ್ಷಗಳ ಇತಿಹಾಸವುಳ್ಳ ಪುಣ್ಯ ಪ್ರಸಿದ್ಧ ಕ್ಷೇತ್ರ. ಕುದುರೆ ಮುಖ ತಪ್ಪಲಿನಲ್ಲಿರುವ ಈ ಕ್ಷೇತ್ರ ಸುತ್ತಲೂ ಕಾಡಿನಿಂದ ಆವೃತ್ತವಾದ ನೈಸರ್ಗಿಕವಾಗಿ ಅದ್ಭುತ ಸೌಂದರ್ಯ ಹೊಂದಿದೆ..ದುರ್ಗಾ ದೇವತೆ,ಕಾಳಿಕಾಂಬ ದೇವತೆಯನ್ನು ಇಲ್ಲಿ ಪ್ರಧಾನವಾಗಿ ಪೂಜಿಸಲಾಗುತ್ತದರ..ಅಲ್ಲದೆ ಗಣಪತಿ,ಶ್ರೀಧರ ಸ್ವಾಮಿ,ಶಿವ ದಕ್ಷಿಣ ಮೂರ್ತಿ,ರಣಗುಳಿಗ,ಶ್ರೀ ನಾಗರಾಜ,ಭೈರವ ರನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.
Published by: Seema R
First published: April 15, 2021, 9:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories