HOME » NEWS » Entertainment » ACTOR JAGGESH REVELED HIS BROTHER KOMAL SURVIVED BY COVID SESR

Jaggesh: ರಾಯರ ಪವಾಡದಿಂದ ತಮ್ಮ ಬದುಕಿದ; ಕೋಮಲ್​ ಕೊರೋನಾ ಗೆದ್ದ ಸತ್ಯ ಬಿಚಿಟ್ಟ ಜಗ್ಗೇಶ್​

ಎರಡು ವಾರದ ಹಿಂದೆ ಸೋಂಕಿನಿಂದ ಗಂಭೀರಗೊಂಡ ಕೋಮಲ್​ ಅವರನ್ನು ನಟ ಜಗ್ಗೇಶ್​ ಆಸ್ಪತ್ರೆಗೆ ಸೇರಿಸಿದ್ದಾರೆ.

news18-kannada
Updated:April 27, 2021, 6:15 PM IST
Jaggesh: ರಾಯರ ಪವಾಡದಿಂದ ತಮ್ಮ ಬದುಕಿದ; ಕೋಮಲ್​ ಕೊರೋನಾ ಗೆದ್ದ ಸತ್ಯ ಬಿಚಿಟ್ಟ ಜಗ್ಗೇಶ್​
ಜಗ್ಗೇಶ್​-ಕೋಮಲ್​
  • Share this:
ಕೊರೋನಾ ಎರಡನೇ ಅಲೆಯ ಸೋಂಕು ಉಸಿರಾಟಕ್ಕೆ ಕುತ್ತು ತರುತ್ತಿದ್ದು, ಆಕ್ಸಿಜನ್​ ಮಟ್ಟ ಕಡಿಮೆಯಾಗಿ ಜನರು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. ಕೋವಿಡ್​ಗೆ ಅನೇಕ ಸೆಲೆಬ್ರಿಟಿಗಳು ತುತ್ತಾಗುತ್ತಿದ್ದಾರೆ. ನಟ ಜಗ್ಗೇಶ್​ ತಮ್ಮ ಕೋಮಲ್​ ಕೂಡ ಸೋಂಕಿಗೆ ತುತ್ತಾಗಿ, ಸಾವು ಬದುಕಿನ ಹೋರಾಟದಿಂದ ಗೆದ್ದಿದ್ದಾರೆ. ತಮ್ಮ ಹೇಗೆ ಕೋವಿಡ್​ ಗೆದ್ದು ಬಂದ ಎಂಬ ಕಥೆಯನ್ನು ನಟ ಜಗ್ಗೇಶ್​ ಟ್ವೀಟರ್​ ಮೂಲಕ ಹಂಚಿಕೊಂಡಿದ್ದಾರೆ. ಆಕ್ಸಿಜನ್​ ಮಟ್ಟ 80ಕ್ಕೆ ಇಳಿದ ಆತ ರಾಯರ ಆಶೀರ್ವಾದದಿಂದ ಈಗ ಗುಣಮುಖನಾಗಿದ್ದಾನೆ ಎಂದು ಸಂತಸವನ್ನು ಹಂಚಿಕೊಂಡಿದ್ದಾರೆ.

ಹಲವು ಹಿಟ್​ ಸಿನಿಮಾ ನೀಡಿದ ಕೋಮಲ್​ ಸಿನಿ ರಂಗದಿಂದ ದೂರಾಗಿ ಸ್ವತಃ ವ್ಯವಹಾರ ನಡೆಸುತ್ತಿದ್ದಾರೆ. ಅವರು ಇತ್ತೀಚಿಗೆ ಸೋಂಕಿಗೆ ತುತ್ತಾಗಿದ್ದಾರೆ. ಕೋಮಲ್​ ಸೋಂಕಿಗೆ ತುತ್ತಾಗಿರುವ ವಿಚಾರವನ್ನು ಇದೀಗ ನಟ ಜಗ್ಗೇಶ್​ ತಿಳಿಸಿದ್ದು, ತಮ್ಮ ಹೇಗೆ ಬದುಕುಳಿದ ಎಂಬ ಸತ್ಯ ಬಿಚ್ಚಿಟ್ಟಿದ್ದಾರೆ.




ಬೆಂಗಳೂರಿನ ಕಾರ್ಪೋರೇಷನ್​ನನ್ನು ಸ್ವತಃ ವ್ಯವಹಾರ ಮಾಡಿಕೊಂಡಿದ್ದ ಕೋಮಲ್​ ಬಾಕಿ ವಸೂಲಿಗೆ ಹೋದ ಸಂದರ್ಭದಲ್ಲಿ ಎಲ್ಲೋ ಸೋಂಕಿಗೆ ತುತ್ತಾಗಿದ್ದಾರೆ. ಸೋಂಕು ಉಲ್ಬಣಗೊಂಡು ಕೋಮಲ್​ ಕೊಂಚ ಸೀರಿಯಸ್​ ಎನ್ನುವ ಮಟ್ಟಿಗೆ ತಲುಇದ್ದಾರೆ. ಈ ವೇಳೆ ಅವರ ಆಕ್ಸಿಜನ್​ ಮಟ್ಟ ಕೂಡ ಕ್ಷೀಣಿಸಿದೆ.


ಎರಡು ವಾರದ ಹಿಂದೆ ಸೋಂಕಿನಿಂದ ಗಂಭೀರಗೊಂಡ ಕೋಮಲ್​ ಅವರನ್ನು ನಟ ಜಗ್ಗೇಶ್​ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ವೇಳೆ ಅವರಿಗೆ ಸೋಕು ಶ್ವಾಸಕೋಶಕ್ಕೆ ಸೇರಿ ಆಕ್ಸಿಜನ್​ ಮಟ್ಟ ಶೇ. 80ಕ್ಕೆ ಇಳಿದಿದೆ. ಈ ವೇಳೆ ದಿಕ್ಕು ತೋಚದೇ ಅಣ್ಣನಾಗಿ ನಾನು ಪಟ್ಟ ಪಾಡು ಆ ರಾಯರಿಗೆ ಗೊತ್ತು. ಈ ಸಂದರ್ಭದಲ್ಲಿ ನನ್ನ ಜೊತೆಯಲ್ಲಿದ್ದವರು ಆ ರಾಯರು. ಇದೇ ಕಾರಣಕ್ಕೆ ನಾನು ತಮ್ಮನ ಉಳಿಸಿಕೊಳ್ಳಲು ಆತನ ಜೊತೆ ರಾಯರ ಅಕ್ಷತೆ, ಮೃತ್ತಿಕೆ, ರಾಯರ ಬೃಂದಾವನ ತೊಳೆಯುವ ಪವಿತ್ರ ಜಲವನ್ನು ಕಳಿಸಿಕೊಟ್ಟೆ. ಅದೇನು ಪವಾಡ ನಡೆಯಿತೊ ಗೊತ್ತಿಲ್ಲ. ಕೋಮಲ್​ ಬದುಕಿ ಬಂದಿದ್ದಾನೆ. ಆತ ಈಗ ಅಪಾಯದಿಂದ ಪರಾಗಿದ್ದು, ಆತನ ಆಕ್ಸಿಜನ್​ ಮಟ್ಟ 98ಕ್ಕೆ ಬಂದಿದೆ. ಇದು ನಿಜಕ್ಕೂ ರಾಯರ ಪವಾಡ ಎಂದಿದ್ದಾರೆ.

ನಟ ಜಗ್ಗೇಶ್​ಗೆ ರಾಯರ ಮೇಲೆ ಅಪಾರ ನಂಬಿಕೆ ಇರುವುದು ಎಲ್ಲರಿಗೂ ತಿಳಿದ ವಿಚಾರ. ತಾವು ಕಾಯವಾಚ ಮನಸಾರೆ ರಾಯರನ್ನು ಆರಾಧಿಸುವುದರಿಂದ ಹಲವು ಕಷ್ಟದ ಸಂದರ್ಭದಲ್ಲಿ ನನಗೆ ಅವರು ದಾರಿ ತೋರಿದ್ದಾರೆ ಎಂಬುದನ್ನು ನಟ ಜಗ್ಗೇಶ್​ ಹಲವು ಬಾರಿ ಹೇಳಿದ್ದಾರೆ. ಇತ್ತೀಚೆಗಷ್ಟೇ ನಟ ಪುನೀತ್​ ರಾಜ್​ಕುಮಾರ್​ ಯುವರತ್ನ ಸಿನಿಮಾ ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಮತ್ತವರ ತಂಡ ಜೊತೆಗೆ ಕೂಡ ನಟ ಜಗ್ಗೇಶ್​ ಮಂತ್ರಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು.
Published by: Seema R
First published: April 27, 2021, 6:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories