ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದಲ್ಲಿ ಔಷಧ ಖರೀದಿಯಲ್ಲಿ ಅವ್ಯವಹಾರ ಆರೋಪ
ಕೆ.ಎಫ್.ಡಿ.ಸಿ ಯ ರಬ್ಬರ್ ತೋಟಗಳಲ್ಲಿ ಭಾರೀ ಅವ್ಯವಹಾರ ನಡೆಯುತ್ತಿರುವ ಬಗ್ಗೆ ಆರೋಪಗಳು ಹಿಂದಿನಿಂದಲೂ ಕೇಳಿ ಬರುತ್ತಿದೆ. ಈ ಆರೋಪಗಳು ಕೆಲವು ಬಾರಿ ರಬ್ಬರ್ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಮೇಲೆ ಬಂದರೆ, ಕೆಲವು ಬಾರಿ ರಬ್ಬರ್ ತೋಟಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಅಧಿಕಾರಿಗಳ ಮೇಲೂ ಇದೆ.
news18-kannada Updated:June 3, 2020, 8:29 AM IST
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
- News18 Kannada
- Last Updated: June 3, 2020, 8:29 AM IST
ಪುತ್ತೂರು: ಹಲವು ಅವ್ಯವಹಾರಗಳ ಆರೋಪಗಳಿಗೆ ಗುರಿಯಾಗಿರುವ ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ವಿರುದ್ಧ ಮತ್ತೊಂದು ಅವ್ಯವಹಾರದ ಆರೋಪ ಕೇಳಿಬಂದಿದೆ.
ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮ ಇದರ ಸುಬ್ರಹ್ಮಣ್ಯ ರಬ್ಬರ್ ವಿಭಾಗದ ಕುಮಾರಧಾರ ಘಟಕದಲ್ಲಿ 129 ಹೆಕ್ಟರ್ ಪ್ರದೇಶದಲ್ಲಿರುವ ರಬ್ಬರ್ ನಿಗಮದ ತೋಟದಲ್ಲಿ ಸುಮಾರು 27 ಬ್ಲಾಕ್ ಗಳಿಗೆ ಪೂರ್ಣ ಪ್ರಮಾಣದಲ್ಲಿ ಔಷಧಿ ಸಿಂಪಡಿಸದೆ ನಿಗಮಕ್ಕೆ ವಂಚನೆ ಮಾಡಿರುವುದಾಗಿ ಸ್ವತಃ ರಬ್ಬರ್ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಆರೋಪಿಸಿದ್ದಾರೆ. ರಬ್ಬರ್ ಗಿಡಗಳ ಲೆಕ್ಕಾಚಾರದ ಪ್ರಕಾರ 27 ಬ್ಲಾಕ್ಗಳಿಗೆ ಸುಮಾರು 5160 ಲೀಟರ್ ಅಗತ್ಯವಿದೆ. ಆದರೆ ಕೇವಲ 3000 ಲೀಟರ್ ಔಷಧಿಯನ್ನು ಮಾತ್ರ ಸಿಂಪಡಿಸಲಾಗಿದೆ. ಸುಮಾರು 2160 ಲೀಟರ್ ಔಷಧಿಯ ಕೊರತೆಯಿಂದಾಗಿ ರಬ್ಬರ್ ಮರಗಳಿಗೆ ಔಷಧಿ ಸಿಂಪಡಿಸುವ ಟೆಂಡರ್ ಪಡೆದಿರುವ ಕೇರಳದ ಬಿಜು ಎಂಬುವರು ರಬ್ಬರ್ ಬ್ಲಾಕ್ ಗಳಲ್ಲಿ ಹಲವು ಕಡೆಗಳಲ್ಲಿ ಔಷಧಿ ಸಿಂಪಡಿಸದೆ ತೆರಳಿದ್ದಾರೆ. ಭಾರೀ ಪ್ರಮಾಣದ ಔಷಧೀಯು ಕಡಿಮೆ ಉಪಯೋಗದ ಹಿಂದೆ ಕೆ.ಎಫ್.ಡಿ.ಸಿಯ ಅಧಿಕಾರಿಗಳು ಶಾಮಿಲಾಗಿದ್ದಾರೆ ಎನ್ನುವ ಆರೋಪವನ್ನು ಕಾರ್ಮಿಕರು ಮಾಡಿದ್ದಾರೆ.
ಔಷಧಿ ಸಿಂಪಡಣೆ ಮಾಡದೆ ವಂಚನೆ ಮಾಡಿರುವ ಬಗ್ಗೆ ಕಾರ್ಮಿಕರ ಆರೋಪಗಳ ನಡುವೆ ಇದೀಗ ಕೆ.ಎಫ್.ಡಿ.ಸಿ ಪ್ರಭಾರ ವಿಭಾಗೀಯ ವ್ಯವಸ್ಥಾಪಕ ಮಸ್ತಾನ್ ನೇತೃತ್ವದ ಅಧಿಕಾರಿಗಳ ತಂಡ ತಮ್ಮ ತಪ್ಪನ್ನು ತೋಟದ ಮೇಸ್ತ್ರಿಗಳ ತಲೆಗೆ ಹಾಕಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ ಎನ್ನುವ ಆರೋಪವೂ ಕೇಳಿ ಬರಲಾರಂಭಿಸಿದೆ. ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ಔಷಧಿ ಸಿಂಪಡಿಸಿದ ಪರಿಣಾಮ ಮರದ ಎಲೆಗಳು ಉದುರಿ ರಬ್ಬರ್ ಹಾಲು ಕಡಿಮೆಯಾಗಲಿದೆ. ಒಂದು ವೇಳೆ ಎಲೆ ಉದುರಿ ರಬ್ಬರ್ ಹಾಲು ಕಡಿಮೆಯಾದರೆ ಅದರ ನಷ್ಟಕ್ಕೆ ಕಾರ್ಮಿಕರನ್ನು ಹೊಣೆಗಾರರನ್ನಾಗಿ ಮಾಡುವ ಅಧಿಕಾರಿಗಳು ತಮ್ಮ ಅವ್ಯವಹಾರವನ್ನು ಮುಚ್ಚಿಡಲು ಪ್ರಯತ್ನಿಸಲಾರಂಭಿಸಿದ್ದಾರೆ.
ಇದನ್ನು ಓದಿ: ಆಹಾರ ಎಂಜಲು ಮಾಡಿದ ಪ್ರಕರಣ; ಹಾಸನದಲ್ಲಿ ಹೋಟೆಲ್ ಸೀಲ್‌ಡೌನ್ ಮಾಡಿ ತನಿಖೆ ಆರಂಭ
ಕೆ.ಎಫ್.ಡಿ.ಸಿ ಯ ರಬ್ಬರ್ ತೋಟಗಳಲ್ಲಿ ಭಾರೀ ಅವ್ಯವಹಾರ ನಡೆಯುತ್ತಿರುವ ಬಗ್ಗೆ ಆರೋಪಗಳು ಹಿಂದಿನಿಂದಲೂ ಕೇಳಿ ಬರುತ್ತಿದೆ. ಈ ಆರೋಪಗಳು ಕೆಲವು ಬಾರಿ ರಬ್ಬರ್ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಮೇಲೆ ಬಂದರೆ, ಕೆಲವು ಬಾರಿ ರಬ್ಬರ್ ತೋಟಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಅಧಿಕಾರಿಗಳ ಮೇಲೂ ಇದೆ. ಕಾರ್ಮಿಕರ ಮೇಲೆ ರಬ್ಬರ್ ತೋಟಗಳಲ್ಲಿ ಸಂಗ್ರಹವಾಗುವ ರಬ್ಬರ್ ಹಾಲುಗಳನ್ನು ಕದಿಯುವ ಆರೋಪವಿದ್ದರೆ, ಅಧಿಕಾರಿಗಳು ಔಷಧಿ ಖರೀದಿ ಸೇರಿದಂತೆ ನಿಯಮ ಮೀರಿ ವ್ಯವಹಾರಗಳನ್ನು ನಡೆಸುತ್ತಿರುವ ಆರೋಪವೂ ಇದೆ.
ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮ ಇದರ ಸುಬ್ರಹ್ಮಣ್ಯ ರಬ್ಬರ್ ವಿಭಾಗದ ಕುಮಾರಧಾರ ಘಟಕದಲ್ಲಿ 129 ಹೆಕ್ಟರ್ ಪ್ರದೇಶದಲ್ಲಿರುವ ರಬ್ಬರ್ ನಿಗಮದ ತೋಟದಲ್ಲಿ ಸುಮಾರು 27 ಬ್ಲಾಕ್ ಗಳಿಗೆ ಪೂರ್ಣ ಪ್ರಮಾಣದಲ್ಲಿ ಔಷಧಿ ಸಿಂಪಡಿಸದೆ ನಿಗಮಕ್ಕೆ ವಂಚನೆ ಮಾಡಿರುವುದಾಗಿ ಸ್ವತಃ ರಬ್ಬರ್ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಆರೋಪಿಸಿದ್ದಾರೆ.