news18-kannada Updated:April 16, 2021, 8:56 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು(ಆ.16): ರಾಜ್ಯದಲ್ಲಿ ಕೊರೋನಾ ಸೋಂಕು ದಿನೇ ದಿನೇ ತನ್ನ ಆರ್ಭಟ ಹೆಚ್ಚು ಮಾಡಿದೆ. ನಿನ್ನೆ ಸುಮಾರು 15 ಸಾವಿರ ಪ್ರಕರಣಗಳು ಪತ್ತೆಯಾಗಿವೆ. ಆಸ್ಪತ್ರೆಗಳಲ್ಲಿ ಬೆಡ್ಗಳಿಲ್ಲದೇ ಕೊರೋನಾ ಸೋಂಕಿತರು ಪರದಾಡುತ್ತಿದ್ದಾರೆ. ಈ ನಡುವೆಯೇ ಕೊರೋನಾ ತಡೆಯಲು ಬೇಕಾದ ಇಂಜೆಕ್ಷನ್ ಕೊರತೆ ಕಾಣಿಸುತ್ತಿದೆ. ಹೌದು, ಕೊರೋನಾ ನಿಯಂತ್ರಣಕ್ಕೆ ಬಳಸುತ್ತಿದ್ದ ರೆಮ್ಡಿಸ್ವಿರ್ ಚುಚ್ಚುಮದ್ದು ಈಗ ಖಾಸಗಿ ಆಸ್ಪತ್ರೆಗಳಲ್ಲಿ ಸಿಗುತ್ತಿಲ್ಲ ಎಂದು ತಿಳಿದು ಬಂದಿದೆ.
ದುಡ್ಡು ಕೊಟ್ಟರೂ ಸಹ ರೆಮ್ಡಿಸ್ ವಿರ್ ಇಂಜೆಕ್ಷನ್ ಹೊರಗಡೆ ಸಿಗುತ್ತಿಲ್ಲ. ಕಾಳಸಂತೆಯಲ್ಲಿ ಇಂಜೆಕ್ಷನ್ ಬಿಕರಿಯಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ಈ ಆಯ್ಯಂಟಿ ವೈರಲ್ ಡ್ರಗ್ ಇಲ್ಲದೆ ರೋಗಿಗಳು ಪರದಾಡುವಂತಾಗಿದೆ. ಮೂಲ ಬೆಲೆಗಿಂತ ಹತ್ತು ಪಟ್ಟು ಹೆಚ್ಚಿನ ಬೆಲೆಗೆ ರೆಮ್ಡಿಸ್ವಿರ್ ಇಂಜೆಕ್ಷನ್ನ್ನು ಮಾರಾಟ ಮಾಡಲಾಗುತ್ತಿದೆ.
4-5 ಸಾವಿರ ಬೆಲೆಯ ವೈರಲ್ ಡ್ರಗ್ನ್ನು 20-40 ಸಾವಿರದವರೆಗೆ ಮಾರಾಟ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಇದೇ ಕಾರಣದಿಂದಾಗಿ ದುಡ್ಡು ಕೊಟ್ಟರೂ ಕೆಲವೊಮ್ಮೆ ಈ ಇಂಜೆಕ್ಷನ್ ಸಿಗುತ್ತಿಲ್ಲ.
ಇಂಜೆಕ್ಷನ್ ಬೆಲೆ ಅದೆಷ್ಟೇ ಆದ್ರೂ ಖರೀದಿಸಿ ಜೀವ ಉಳಿಸಿಕೊಳ್ಳಬೇಕು ಎಂದು ಜನರು ಮುಂದಾಗುತ್ತಿದ್ದಾರೆ. ಇದನ್ನೇ ಲಾಭವಾಗಿಸಿಕೊಂಡ ಕೆಲವರು ಪ್ರಾಣಭಯವನ್ನೇ ವ್ಯಾಪಾರ ಮಾಡಿಕೊಂಡು ಕಾಳಸಂತೆಯಲ್ಲಿ ಹತ್ತು ಪಟ್ಟು ಹೆಚ್ಚಿನ ಬೆಲೆಗೆ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ನೊಂದವರು ಪೊಲೀಸ್ ಕಮಿಷನರ್‌ಗೂ ಪತ್ರ ಬರೆದಿದ್ದಾರೆ.
ಆನೇಕಲ್: ಅಂದು ನೀರಿನಿಂದ ತುಂಬಿ ತುಳುಕುತ್ತಿದ್ದ ಕೆರೆ ಇಂದು ಕಸದಿಂದ ಗಬ್ಬುನಾರುತ್ತಿದೆ...!
2ನೇ ಕೊರೊನಾ ಕೇಸ್ ಏರಿಕೆ ಹಿನ್ನೆಲೆ, ಇಂಜೆಕ್ಷನ್ಗೆ ದಿಢೀರ್ ಬೇಡಿಕೆ ಹೆಚ್ಚಾಗಿದೆ.
ಆಸ್ಪತ್ರೆಗಳಲ್ಲಿ ಬೇಡಿಕೆಯಷ್ಟು ಇಂಜೆಕ್ಷನ್ ಸ್ಟಾಕ್ ಇಲ್ಲದ ಕಾರಣ ಸಂಕಷ್ಟ ಎದುರಿಸುವಂತಾಗಿದೆ. ಈ ಇಂಜೆಕ್ಷನ್ನ್ನು ಆಸ್ಪತ್ರೆಗೆ ದಾಖಲು ಮಾಡಿದ ಕೂಡಲೇ ಕೊಡಲೇಬೇಕು. ಎರಡು ದಿನದೊಳಗೆ ಈ ವೈರಲ್ ಡ್ರಗ್ ಕೊಡದೇ ಹೋದಲ್ಲಿ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಈ ಚುಚ್ಚುಮದ್ದು ವಿಶ್ವ ಆರೋಗ್ಯ ಸಂಸ್ಥೆ (WHO) ಯಿಂದ ಪ್ರಮಾಣಿತಗೊಂಡಿದೆ.ಸರ್ಕಾರಿ ಆಸ್ಪತ್ರೆಯಲ್ಲಿ ಈ ಡ್ರಗ್ ಸದ್ಯಕ್ಕೆ ದಾಸ್ತಾನು ಇದೆ. ಆದರೆ ಖಾಸಗಿ ದೊಡ್ಡ ಹಾಗೂ ಸಣ್ಣ ಆಸ್ಪತ್ರೆಗಳಲ್ಲಿ ಎರಡು ದಿನಕ್ಕಾಗುವಷ್ಟು ಇಂಜೆಕ್ಷನ್ ಇಲ್ಲ. ಸರಬರಾಜು ಮಾಡುವಂತೆ ಖಾಸಗಿ ಆಸ್ಪತ್ರೆ ಸಂಘ (ಫನಾ) ಕಳೆದ ವಾರವೇ ಸರ್ಕಾರಕ್ಕೆ ಮನವಿ ಮಾಡಿದೆ. ಬೆಂಗಳೂರಿನ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಈ ಇಂಜೆಕ್ಷನ್ ಅಲಭ್ಯವಿದೆ. ಪ್ರತಿ ದಿನ ರೆಮಿಡಿಸ್ ವೈರ್ ಮೂರು ಸಾವಿರ ವೈಲ್ ಬೇಕು. ಆದರೆ ಈಗ ಶೇ.10ರಷ್ಟು ಇಂಜೆಕ್ಷನ್ ಇಲ್ಲ.
ಬೆಂಗಳೂರಿನ ಖಾಸಗಿ ಆಸ್ಪತ್ರೆಗಳು ಈಗಾಗಲೇ ಮೂರು ಸಾವಿರ ರೋಗಿಗಳಿಂದ ಭರ್ತಿಯಾಗಿವೆ. 5 ದಿನಗಳಲ್ಲಿ 15,000 ವೈಲ್ ಬೇಕಿದೆ ಎಂದು ಫನಾ ಬೇಡಿಕೆ ಇಟ್ಟಿದೆ.
ಖಾಸಗಿ ಇಲ್ಲವೇ ಸರ್ಕಾರ ಉಗ್ರಾಣದಿಂದ ಇಂಜೆಕ್ಷನ್ ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ.
Published by:
Latha CG
First published:
April 16, 2021, 8:56 AM IST