- News18 Kannada
- Last Updated: April 16, 2021, 6:37 PM IST
- K PUTTAPPA News18 Media
ಮೈಸೂರು (ಏ. 16): ಗಂಡ ಮೂವರು ಮಕ್ಕಳನ್ನು ಬಿಟ್ಟು ಬಂದು ಮಾವನ ಮಗನ ಜೊತೆ ಸಂಸಾರ ನಡೆಸುತ್ತಿದ್ದ ಆಕೆ ಇಂದು ಹೆಣವಾಗಿದ್ದಾಳೆ. ದಿನಕಳೆದಂತೆ ಮಾವನ ಮಗನಿಗೆ ಆಕೆಯ ಮೇಲಿದ್ದ ಪ್ರೀತಿ ಕಳೆದಂತೆ ಕಡಿಮೆಯಾಗಿತ್ತು. ಪ್ರತಿ ದಿನ ಕೂಡ ಟಾರ್ಚರ್ ಕೊಡುವುದಕ್ಕೆ ಶುರು ಮಾಡಿದ್ದನಂತೆ. ಇದರಿಂದ ಬೇಸತ್ತು ಅಮ್ಮನ ಮನೆಗೆ ವಾಪಸ್ಸು ಹೋಗ್ತಿನಿ ಎಂದು ಹೊರಟವಳನ್ನು ಆತ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಮೈಸೂರಿನಲ್ಲಿ ನಡೆದ ಈ ಘಟನೆ ಎಲ್ಲರನ್ನ ಬೆಚ್ಚಿ ಬಿಳಿಸಿದ್ದು ಆರೋಪಿಯ ಬಂಧನ ಆಗಿದೆ. ಸಾವನ್ನಪ್ಪಿದವಳನ್ನು ಕುಮಾರಿ ಎನ್ನಲಾಗಿದೆ. ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಕ್ಯಾತನಹಳ್ಳಿ ನಿವಾಸಿ. ಕಳೆದ ಐದು ವರ್ಷದ ಹಿಂದೆ ಹುಣಸೂರಿನ ಮನುಗನಹಳ್ಳಿಯ ಸ್ವಾಮಿ ಎಂಬಾತನ ಜೊತೆ ಈಕೆಗೆ ವಿವಾಹವಾಗಿತ್ತು. ಬಳಿಕ ಎರಡು ಗಂಡು, ಒಂದು ಹೆಣ್ಣು ಮಗು ಸಹ ಇತ್ತು. ಬರು ಬರುತ್ತಾ ಗಂಡ ತನ್ನನ್ನ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ತವರು ಮನೆ ಸೇರಿದ್ದಳು. ಈ ವೇಳೆ ಸಣ್ಣ ವಯಸ್ಸಿನಿಂದಲು ಪ್ರೀತಿ ಇದ್ದ ಮಾವನ ಮಗನ ಕಿರಣ್ ಎಂಬಾತನ ಜೊತೆ ಕಳೆದ ಒಂದು ವರ್ಷದಿಂದ ಸಂಸಾರ ನಡೆಸುತ್ತಿದ್ದಳು.
ಒಂದು ವರ್ಷದ ಹಿಂದೆ ಗಂಡನ ಬಿಟ್ಟು ಬಂದ ಕುಮಾರಿ ಮೈಸೂರಿನ ಬೆಳವಾಡಿಯಲ್ಲಿ ಕಿರಣ್ ಜೊತೆ ಸಂಸಾರ ನಡೆಸಿದ್ದಾಳೆ. ಕಳೆದ 20 ದಿನ ಹಿಂದಷ್ಟೆ ಬೆಳವಾಡಿಯ ವಿಶಾಲಾಕ್ಷಿ ಎಂಬುವವರ ಮನೆಗೆ ಬಾಡಿಗೆಗೆ ಬಂದಿದ್ದಾರೆ. ಈ ವೇಳೆ ಇಬ್ಬರು ತಾವಿಬ್ಬರು ಗಂಡ ಹೆಂಡತಿ ಅಂತ ಹೇಳಿಕೊಂಡಿದ್ದರಂತೆ. ಅವರ ಮಾತನನ್ನು ನಂಬಿ ಮನೆಯನ್ನು ಬಾಡಿಗೆಗೆ ನೀಡಿದ್ದಾರೆ. ಆದರೆ, ನಿನ್ನೆ ಬೆಳಿಗ್ಗೆ ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ಪ್ರೀತಿ ಕುಮಾರಿ ನೆರೆಹೊರೆಯವರ ಬಳಿ ಹೋಗಿ ನಿಜವಾದ ಕಥೆ ಹೇಳಿದ್ದಾಳೆ. ಅಷ್ಟೆ ಅಲ್ಲದೆ ಈತನು ಕೂಡ ಟಾರ್ಚರ್ ಕೊಡುತ್ತಿದ್ದಾನೆ. ಇವನ ಜೊತೆ ಇರಲು ಸಾಧ್ಯವಿಲ್ಲ ನಾನು ತವರು ಮನೆಗೆ ಹೋಗುತ್ತೇನೆ ಎಂದು ಹೇಳಿದ್ದಳಂತೆ.
ಈ ವೇಳೆ ಮನೆಯವರಿಗೂ ವಿಚಾರ ತಿಳಿಸಿ ಅವರನ್ನು ಬರುವಂತೆ ಹೇಳಿ ನಂತರ ಹೋಗು ಎಂದು ತಿಳಿಸಿದ್ದಾರೆ. ಈ ವೇಳೆ ಮನೆಯವರು ಬಂದ ನಂತರ ಹೋಗಲು ರೆಡಿಯಾಗಿದ್ದಾಳೆ. ತನ್ನ ತೊರೆದು ಹೋಗಲು ಅತ್ತೆ ಮಗಳು ಮುಂದಾದಗ ಕುಪಿತಗೊಂಡ ಕಿರಣ್, ಎಲ್ಲರೆದರು ಆಕೆಯನ್ನ ಮಚ್ಚಿನಿಂದ ಕೊಚ್ಚಿ ಹಲ್ಲೆ ಮಾಡಿದ್ದಾನೆ.
ಇದನ್ನು ಓದಿ: ಪವರ್ ಸ್ಟಾರ್ ಪವನ್ ಕಲ್ಯಾಣ್ಗೆ ಕೋವಿಡ್; ಆಸ್ಪತ್ರೆಗೆ ದಾಖಲಾದ ಜನಸೇನಾ ನಾಯಕ
ಇನ್ನು ತಕ್ಷಣ ಆಕೆಯನ್ನು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ಸೇರಿಸಿದ್ದಾರೆ. ನಂತರ ವಿಜಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರೀತಿಕುಮಾರಿ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾಳೆ. ನಂತರ ಕಿರಣ್ ವಶಕ್ಕೆ ತೆಗೆದುಕೊಂಡ ವಿಚಾರಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೊಲೆಗೆ ಅಸಲಿ ಕಾರಣವನ್ನು ಬಿಚ್ವಿಟ್ಟಿದ್ದಾನೆ. ಇತ್ತೀಚಿಗೆ ಆಕೆಯ ಮೇಲೆ ಪ್ರೀತಿ ಕಡಿಮೆಯಾಗಿತ್ತಂತೆ. ಜೊತೆಗೆ ಬೇರೆಯವರ ಜೊತೆ ಆಕೆ ಸಂಪರ್ಕದಲ್ಲಿದ್ದಾಳೆ ಎಂಬ ಅನುಮಾನ ಬೇರೆ ಇತ್ತಂತೆ. ಅಲ್ಲದೇ, ಈತ ಕೂಲಿ ಮಾಡುತ್ತಿದ್ದರಿಂದ ಮೂರು ಮಕ್ಕಳನ್ನು ಸಾಕುವುದು ಕಷ್ಟವಾಗಿತ್ತು ಎಂದು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ.
ಆತನ ಅನುಮಾನದ ಕಣ್ಣಿಗೆ ಆಕೆ ಕೊಲೆಯಾಗಿ ಹೋಗಿದ್ದಾಳೆ. ಆದರೆ ಜಗತ್ತಿನ ಅರಿವು ಮೂಡುತ್ತಿದ್ದ ಮೂರು ಮಕ್ಕಳು ಅನಾಥವಾಗಿದ್ದಾರೆ. ಕಣ್ಣಮುಂದೆ ನಡೆದ ಕೊಲೆಯ ಭೀಕರತೆಯನ್ನ ಕಂಡ ಬೆಳವಾಡಿ ಜನತೆಯಂತು ಬೆಚ್ಚಿಬಿದ್ದಿದ್ದಂತು ಸುಳ್ಳಲ್ಲ.