ಭಾಷೆಯನ್ನು ಆಯ್ಕೆಮಾಡಿ :

ಕನ್ನಡ (Kannada)

west-bengalASSEMBLY ELECTIONS 2021

292/292 SEATS (147 SEATS TO WIN)

Alliance TMCBJPLEFT+OTH
Wins
+
Leads
2147611
+/- 2015

292/292 SEATS

(147 SEATS TO WIN)

tamil-naduASSEMBLY ELECTIONS 2021

234/234 SEATS (118 SEATS TO WIN)

Alliance DMK+AIADMK+MNM+AMMK+OTH
Wins
+
Leads
15975000
+/- 2015

234/234 SEATS

(118 SEATS TO WIN)

keralaASSEMBLY ELECTIONS 2021

140/140 SEATS (71 SEATS TO WIN)

Alliance LDFUDFBJP+OTH
Wins
+
Leads
994100
+/- 2015

140/140 SEATS

(71 SEATS TO WIN)

assamASSEMBLY ELECTIONS 2021

126/126 SEATS (64 SEATS TO WIN)

Alliance BJP+INC+OTH
Wins
+
Leads
75501
+/- 2015

126/126 SEATS

(64 SEATS TO WIN)

puducherryASSEMBLY ELECTIONS 2021

30/30 SEATS (16 SEATS TO WIN)

Alliance BJP+INC+OTH
Wins
+
Leads
1695
+/- 2015

30/30 SEATS

(16 SEATS TO WIN)

Maski By Election: ನಾಳೆ ಮಸ್ಕಿ ಉಪಚುನಾವಣೆ; ಜಿಲ್ಲಾಡಳಿತದಿಂದ ಸಕಲ ಸಿದ್ದತೆ, ಬಿಗಿ ಪೊಲೀಸ್ ಭದ್ರತೆ

ಮಸ್ಕಿ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆ,  ಶಾಂತಿಯುತ ಮತದಾನಕ್ಕಾಗಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಹೇಳಿದ್ದಾರೆ.

ರಾಯಚೂರು(ಏ.16): ನಾಳೆ ನಡೆಯಲಿರುವ ಮಸ್ಕಿ ಉಪಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಆರ್ ವೆಂಕಟೇಶ ಕುಮಾರ ತಿಳಿಸಿದ್ದಾರೆ.  ಕೋವಿಡ್ ನಿಯಮಾವಳಿ ಪ್ರಕಾರ ಮನೆ ಮನೆ ಪ್ರಚಾರ ಮಾತ್ರ ಮಾಡಬಹುದು, ಇದುವರೆಗೆ 60 ದೂರು ದಾಖಲಾಗಿವೆ, 46 ಕೋವಿಡ್ ಪ್ರಕರಣ, 14 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ, ಇದರಲ್ಲಿ 7 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಇದುವರೆಗೆ 3.50 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.  1.33 ಲಕ್ಷ ಮೌಲ್ಯದ 355 ಲೀ. ಮದ್ಯ ಜಪ್ತಿ, ಕೋವಿಡ್ ಸೋಂಕಿತರು ಮತ್ತು ಸಂಪರ್ಕಿತರು ಸಂಜೆ 6 ರಿಂದ 7 ಗಂಟೆವರೆಗೆ ಮತದಾನ ಮಾಡಲು ಸಮಯ ನಿಗದಿ ಮಾಡಲಾಗಿದೆ ಎಂದು ಹೇಳಿದರು.


ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್​ಗೆ ಕೊರೋನಾ ಸೋಂಕು ಹಿನ್ನೆಲೆ, 18 ಜನ ಪ್ರಾಥಮಿಕ ಸಂಪರ್ಕಿತರ ವರದಿ ಇನ್ನೂ ಬರಬೇಕಾಗಿದೆ. ಪ್ರಾಥಮಿಕ ಸಂಪರ್ಕಿತರು ಸಂಜೆ 6 ರಿಂದ 7 ಕ್ಕೆ ಮತದಾನ ಮಾಡಬೇಕು. ಕ್ಷೇತ್ರದಲ್ಲಿ ಒಟ್ಟು 206834 ಜನ ಮತದಾರರಿದ್ದಾರೆ. ಒಟ್ಟು 305 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.  ಮತಗಟ್ಟೆಗೆ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು ಮೇ 2 ರಂದು ರಾಯಚೂರಿನ ಎಸ್ಆರ್ ಪಿಎಸ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.


ಇದೇ ವೇಳೆ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ರ್ಯಾಂಡಮ್ ಟೆಸ್ಟ್ ಗೆ ಪ್ಲಾನ್ ಮಾಡಲಾಗಿದೆ. ಜಿಲ್ಲೆಯಾದ್ಯಂತ ಕೊರೊನಾ ಸೋಂಕು ದಿನೇ ದಿನೇ ಹೆಚ್ಚಳವಾಗುತ್ತಿದೆ. ಚುನಾವಣೆ ಬಳಿಕ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ರ್ಯಾಂಡಮ್ ಟೆಸ್ಟ್ ಆರಂಭ ಮಾಡಲಾಗುವುದು. ಮಸ್ಕಿ ಕ್ಷೇತ್ರವನ್ನು ಸ್ಪೆಷಲ್ ಆಗಿ ಪರಿಗಣಿಸಿ ರ್ಯಾಂಡಮ್ ಟೆಸ್ಟ್ ಮಡಲಾಗುತ್ತದೆ. ಮಸ್ಕಿ ಕ್ಷೇತ್ರದ ತುಂಬಾ ಜನರು ಅಧಿಕ ಜನರು ಸೇರಿದ ಭಾಗವಾಗಿ ರ್ಯಾಂಡಮ್ ಟೆಸ್ಟ್ ಮಾಡಲಾಗುವುದು.  ನಿತ್ಯ 1000ಕ್ಕೂ ಅಧಿಕ ಜನರಿಗೆ ಟೆಸ್ಟ್ ಮಾಡಲು ಜಿಲ್ಲಾಡಳಿತ ಗುರಿ ಹೊಂದಲಾಗಿದೆ.


23 ಮಕ್ಕಳ ಜವಾಬ್ದಾರಿ ನಿಭಾಯಿಸಲು ಕ್ರೌಡ್​ ಫಂಡಿಂಗ್​ ಮೂಲಕ 53 ಲಕ್ಷ ನೆರವು ಪಡೆದ ಬೆಂಗಳೂರು ಮೂಲದ ದಂಪತಿ

ಮಸ್ಕಿ ಕ್ಷೇತ್ರದಲ್ಲಿ ರ್ಯಾಲಿ, ಸಮಾವೇಶ ನಡೆದ ಕಡೆಗಳಲ್ಲಿ ಕಡ್ಡಾಯವಾಗಿ ರ್ಯಾಂಡಮ್ ಟೆಸ್ಟ್  ಮಾಡಲಾಗುತ್ತದೆ. ತುರ್ವಿಹಾಳ, ಬಳಗನೂರು, ಪಾಮನಕೆಲ್ಲೂರಿನಲ್ಲಿ ರ್ಯಾಂಡಮ್ ಟೆಸ್ಟ್ ಮಾಡಲಾಗುತ್ತದೆ. ಸಭೆ, ಸಮಾವೇಶ ನಡೆದ ಸ್ಥಳದಲ್ಲೇ ರ್ಯಾಂಡಮ್ ಟೆಸ್ಟ್ ಮಾಡಲಾಗುವುದು ಎಂದು ತಿಳಿಸಿದರು.


ಮಸ್ಕಿ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆ,  ಶಾಂತಿಯುತ ಮತದಾನಕ್ಕಾಗಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಹೇಳಿದ್ದಾರೆ, ಕ್ಷೇತ್ರದಲ್ಲಿ ಒಟ್ಟು 62 ಸೂಕ್ಷ್ಮ,07 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತು, 739 ಪೊಲೀಸ್ ಪೇದೆಗಳು,  71 ಎಎಸ್​ಐ,  25 ಪಿಎಸ್​ಐ, ಸಿಪಿಐ 07,  03 ಡಿಎಸ್​ಪಿ.  ಸಿಆರ್​​ಪಿಎಫ್​​ ಹಾಗೂ ಕೆಎಸ್​ಆರ್​​ಪಿ  ಪೊಲೀಸರನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ಚುನಾವಣೆಯ ಸಂದರ್ಭದಲ್ಲಿ ಇದುವರೆಗೂ 7  ಐಪಿಸಿ ಪ್ರಕರಣ ದಾಖಲಾಗಿದ್ದು, 18  ಜನರನ್ನು ಬಂಧಿಸಲಾಗಿದೆ. ಹಣ ಹಂಚಿಕೆ ವೈರಲ್ ಆದ ಬಗ್ಗೆ ವಿಡಿಯೋದಲ್ಲಿ ಕಂಡು ಬಂದ ಎಲ್ಲಾ ವ್ಯಕ್ತಿಗಳನ್ನ ಬಂಧಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಪಿಎಸ್ಐ ಡಾಕೇಶ ಅವರ ಮೇಲೆ ಕೆಪಿಸಿಸಿಯಿಂದ ಆರೋಪ ಮಾಡಿದ್ದಾರೆ. ಎರಡು ಚೀಲದಲ್ಲಿ ಹಣ ಸಾಗಣೆ ವೇಳೆ ಒಂದು ಚೀಲ ಬೇರೆಡೆ ಸಾಗಿಸಿದ ಆರೋಪ, ಎಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು. ತನಿಖೆ ಪೂರ್ಣಗೊಳ್ಳುವರೆಗೂ ಡಿಪಿಓಗೆ ನಿಯೋಜನೆ ಚುನಾವಣೆಗೆ ಬಿಗಿ ಭದ್ರತೆ ಮಾಡಲಾಗಿದೆ.


ಮಸ್ಕಿ ವಿಧಾನಸಭಾ ಕ್ಷೇತ್ರವಾದ ನಂತರ ಪ್ರತಾಪಗೌಡ ಪಾಟೀಲ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅದರಲ್ಲಿ ಎರಡು ಬಾರಿ ಕಾಂಗ್ರೆಸ್ ನಿಂದ, ಒಮ್ಮೆ ಬಿಜೆಪಿಯಿಂದ ಆಯ್ಕೆಯಾಗಿದ್ದು, 2018 ರಲ್ಲಿ ಕಾಂಗ್ರೆಸ್ ನಿಂದ ಕೇವಲ 213 ಮತಗಳ ಅಂತರದಲ್ಲಿ ಜಯಗಳಿಸಿದ್ದರು. ಕಾಂಗ್ರೆಸ್ ಸದಸ್ಯತ್ವಕ್ಕೆ  ರಾಜೀನಾಮೆ ನೀಡಿದ್ದರು. ಅಂದು ಅವರೊಂದಿಗೆ ಎದುರಾಳಿಯಾಗಿ ಸ್ಪರ್ಧಿಸಿದ್ದ ಬಿಜೆಪಿಯಿಂದ ಬಸನಗೌಡ ತುರ್ವಿಹಾಳ ಈಗ ಕಾಂಗ್ರೆಸ್ ಅಭ್ಯರ್ಥಿ ಯಾಗಿದ್ದಾರೆ. ತೀವ್ರ ಕುತೂಹಲ ಮೂಡಿಸಿದ್ದು, ಮತದಾನದ ನಂತರ ಯಾರು ಗೆಲ್ಲಲಿದ್ದಾರೆ ಎಂಬುವುದನ್ನು ತಿಳಿಸಿದ್ದಾರೆ.


ಮಸ್ಕಿ ಕ್ಷೇತ್ರದಲ್ಲಿ ಒಟ್ಟು 206834 ಮತದರರಿದ್ದು ಒಟ್ಟು 305 ಮತಗಟ್ಟೆಗಳಿವೆ. ಒಟ್ಟು 2309 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

Published by: Latha CG
First published: April 16, 2021, 3:41 PM IST