ಭಾಷೆಯನ್ನು ಆಯ್ಕೆಮಾಡಿ :

ಕನ್ನಡ (Kannada)

west-bengalASSEMBLY ELECTIONS 2021

292/292 SEATS (147 SEATS TO WIN)

Alliance TMCBJPLEFT+OTH
Wins
+
Leads
2147611
+/- 2015

292/292 SEATS

(147 SEATS TO WIN)

tamil-naduASSEMBLY ELECTIONS 2021

234/234 SEATS (118 SEATS TO WIN)

Alliance DMK+AIADMK+MNM+AMMK+OTH
Wins
+
Leads
15975000
+/- 2015

234/234 SEATS

(118 SEATS TO WIN)

keralaASSEMBLY ELECTIONS 2021

140/140 SEATS (71 SEATS TO WIN)

Alliance LDFUDFBJP+OTH
Wins
+
Leads
994100
+/- 2015

140/140 SEATS

(71 SEATS TO WIN)

assamASSEMBLY ELECTIONS 2021

126/126 SEATS (64 SEATS TO WIN)

Alliance BJP+INC+OTH
Wins
+
Leads
75501
+/- 2015

126/126 SEATS

(64 SEATS TO WIN)

puducherryASSEMBLY ELECTIONS 2021

30/30 SEATS (16 SEATS TO WIN)

Alliance BJP+INC+OTH
Wins
+
Leads
1695
+/- 2015

30/30 SEATS

(16 SEATS TO WIN)

ಆನೇಕಲ್​: ಅಂದು ನೀರಿನಿಂದ ತುಂಬಿ ತುಳುಕುತ್ತಿದ್ದ ಕೆರೆ ಇಂದು ಕಸದಿಂದ ಗಬ್ಬುನಾರುತ್ತಿದೆ...!

ಒಂದು ಕಾಲದಲ್ಲಿ ಆನೇಕಲ್ ಪಟ್ಟಣ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಿಗೆ ಕುಡಿಯುವ ನೀರು , ಕೃಷಿ ಮತ್ತು ಜಾನುವಾರುಗಳಿಗೆ ನೀರಿನ ಮೂಲವಾಗಿದ್ದ ದೊಡ್ಡ ಕೆರೆ ಇಂದು ನೀರಿಲ್ಲದೆ ಬತ್ತಿಹೋಗಿದೆ . ತಾವು ಚಿಕ್ಕ ವಯಸ್ಸಿನಲ್ಲಿ ಒಂದು ದಿನಕ್ಕೆ ಕೆರೆ ತುಂಬಿ ಕೋಡಿ ಹೋಗುತ್ತಿತ್ತು.  ಆಗ ವರ್ಷಕ್ಕೆ ರೈತರು ಬೇಸಿಗೆ ಮಳೆಗಾಲ ಸೇರಿದಂತೆ ಮೂರು ಬೆಳೆ ತೆಗೆಯುತ್ತಿದ್ರು

ಆನೇಕಲ್(ಏ.16): ಬರಿದಾದ ಕೆರೆಯಲ್ಲಿ ಬರಪೂರ ಕಸ. ಹೌದು ಒಂದು ಕಾಲದಲ್ಲಿ ನೀರಿನಿಂದ ತುಂಬಿ ತುಳುಕುತ್ತಿದ್ದ ಕೆರೆ ಇಂದು ಅಕ್ಷರಶಃ ಕಸದ ತೊಟ್ಟಿಯಾಗಿ ಗಬ್ಬುನಾರುತ್ತಿದೆ . ಸಿಕ್ಕಸಿಕ್ಕ ಕಡೆ ಕಸ ಸುರಿದು ಇಡೀ ಕೆರೆಯನ್ನು ಕಲುಷಿತಗೊಳಿಸಿದ್ದಾರೆ . ಕೆರೆ ಕಸದ ಕೂಪವಾಗುತ್ತಿದ್ರು ಅಧಿಕಾರಿಗಳ ಕಣ್ಣಿಗೆ ಕಸ ಕಾಣಿಸುತ್ತಿಲ್ಲ , ಮೂಗಿಗೆ ದುರ್ನಾತ ಬೀರುತ್ತಿಲ್ಲ ಅನ್ನಿಸುತ್ತೆ.


ಹೌದು, ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಐತಿಹಾಸಿಕ ದೊಡ್ಡಕೆರೆ ಬರೋಬ್ಬರಿ 200 ಎಕರೆಗು ಅಧಿಕ ವಿಸ್ತಿರ್ಣ ಹೊಂದಿದ್ದು , ದಶಕಗಳ ಕಾಲ ಸುತ್ತಮತ್ತಲ ಹಳ್ಳಿಗಳ ಜಲಮೂಲವಾಗಿತ್ತು . ಕ್ರಮೇಣ ನೀರಿನ ಬರದಿಂದ ಕೆರೆ ಬರಡು ಭೂಮಿಯಾಗಿದೆ. ಆನೇಕಲ್ ಪಟ್ಟಣದ ಕೊಳಚೆ ನೀರು ಮಾತ್ರ ಕೆರೆಗೆ ಹರಿದು ಬರುತ್ತಿದ್ದು , ಜೊತೆಗೆ ಕೈಗಾರಿಕಾ ತ್ಯಾಜ್ಯ , ಕಸ ಕಡ್ಡಿ,ಪ್ಲಾಸ್ಟಿಕ್ ಹೀಗೆ ಬೇಡದ ವಸ್ತುಗಳ ಆಗರವಾಗಿ  ಕೆರೆ ಗಬ್ಬುನಾರುತ್ತಿದೆ.


ಮೊದಲು ರಾಜಕಾಲುವರಗಳು ಮತ್ತು ಸಂಪರ್ಕ ಕಾಲುವೆಗಳ ಮೂಲಕ ಮಳೆ ನೀರು ಕೆರೆಗೆ ಸರಾಗವಾಗಿ ಹರಿದು ಬರುತ್ತಿತ್ತು . ಆದ್ರೆ ಈಗ ರಾಜಕಾಲುವೆಗಳು ಒತ್ತುವರಿಯಾಗಿವೆ . ಇದರಿಂದ ಕೆರೆಗೆ ನೀರಿನ ಹರಿವು ಇಲ್ಲದೆ ಬರಿದಾಗಿದೆ . ಕೆರೆ ತುಂಬಿ 20 ವರ್ಷಗಳು ಕಳೆದಿದೆ . ಸಂಬಂದಪಟ್ಟ ಅಧಿಕಾರಿಗಳು ಕೆರೆ ಅಭಿವೃದ್ಧಿಗೆ ಮುಂದಾಗಬೇಕಿದೆ ಎಂದು  ಸ್ಥಳೀಯರಾದ ಕುಮಾರ್ ತಿಳಿಸಿದ್ದಾರೆ.


ಕಲಾವಿದರಲ್ಲದವರಿಗೆ ಮಾಸಾಶನ ನೀಡುತ್ತಿರುವ ಆರೋಪ; ಪರಿಶೀಲಿಸಿ ಕಠಿಣ ನಿಯಮಾವಳಿ ರೂಪಿಸಲಾಗುತ್ತೆ ಎಂದ ಸಚಿವ ಅರವಿಂದ್ ಲಿಂಬಾವಳಿ

ಇನ್ನು ಒಂದು ಕಾಲದಲ್ಲಿ ಆನೇಕಲ್ ಪಟ್ಟಣ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಿಗೆ ಕುಡಿಯುವ ನೀರು , ಕೃಷಿ ಮತ್ತು ಜಾನುವಾರುಗಳಿಗೆ ನೀರಿನ ಮೂಲವಾಗಿದ್ದ ದೊಡ್ಡ ಕೆರೆ ಇಂದು ನೀರಿಲ್ಲದೆ ಬತ್ತಿಹೋಗಿದೆ . ತಾವು ಚಿಕ್ಕ ವಯಸ್ಸಿನಲ್ಲಿ ಒಂದು ದಿನಕ್ಕೆ ಕೆರೆ ತುಂಬಿ ಕೋಡಿ ಹೋಗುತ್ತಿತ್ತು.  ಆಗ ವರ್ಷಕ್ಕೆ ರೈತರು ಬೇಸಿಗೆ ಮಳೆಗಾಲ ಸೇರಿದಂತೆ ಮೂರು ಬೆಳೆ ತೆಗೆಯುತ್ತಿದ್ರು . ಈಗ ಕೆರೆ ನೀರಿಲ್ಲದೆ ಬತ್ತಿ ಹೋಗಿದ್ದು ,  ಒಂದು ಬೆಳೆ ತೆಗೆಯುವುದು ಕಷ್ಟವಾಗಿದೆ . ಇದು ಹೀಗೆ ಮುಂದುವರಿದರೆ ಜಲಕ್ಷಾಮ ಬಂದೆರಗಿದ್ರು ಆಶ್ಚರ್ಯಪಡಬೇಕಿಲ್ಲ ಎನ್ನುತ್ತಿದ್ದಾರೆ ರೈತರು.


ಕಳೆದ 18 ವರ್ಷಗಳಿಂದ ಕೆರೆ ತುಂಬಿಲ್ಲ . ಕೆರೆಯ ಸುತ್ತಮುತ್ತಲಿನ ರಾಜ ಕಾಲುವೆಗಳು ಒತ್ತುವರಿಯಾವೆ . ಹಾಗಾಗಿ ಕೆರೆಗೆ ಮಳೆ ನೀರು ಹರಿದು ಬರುತ್ತಿಲ್ಲ . ಬದಲಿಗೆ ಆನೇಕಲ್ ಪಟ್ಟಣದ ಕೊಳಚೆ ನೀರು ಕೆರೆ ಸೇರುತ್ತಿದ್ದು, ಕಲುಷಿತಗೊಂಡಿದೆ. ಸರ್ಕಾರ ಮಾತ್ರ ಕೆರೆ ಉಳಿವಿಗೆ ಕ್ರಮಕೈಗೊಂಡಿಲ್ಲ ಎಂದು ರೈತ ನಾರಾಯಣಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಒಂದು ಕಾಲದಲ್ಲಿ ಜನ ಜಾನುವಾರುಗಳ ಜೀವನಾಡಿಗಳಾಗಿದ್ದ ಕೆರೆಗಳು , ಮನುಷ್ಯನ ದುರಾಸೆಗೆ ಕಸದ ಕೇಂದ್ರಗಳಾಗುತ್ತಿದ್ದು , ಇನ್ನಾದ್ರು ತಾಲ್ಲೂಕು ಆಡಳಿತ ಎಚ್ಚೆತ್ತು ಐತಿಹಾಸಿಕ ದೊಡ್ಡ ಕೆರೆ ಅಭಿವೃದ್ದಿಗೆ ಮುಂದಾಗಬೇಕಿದೆ.

Published by: Latha CG
First published: April 16, 2021, 8:34 AM IST