- News18 Kannada
- Last Updated: April 3, 2021, 2:20 PM IST
ಅಸ್ಸಾಂ (ಏ. 3): ಬಿಜೆಪಿ ಸರ್ಕಾರ ತಾರತಮ್ಯ ಮಾಡದೇ ದೇಶದ ಜನರಿಗಾಗಿ ಸೇವೆ ಮಾಡುತ್ತಿದೆ. ಆದರೆ, ಕೆಲವರು ತಮ್ಮ ಮತ ಬ್ಯಾಂಕ್ಗಾಗಿ ದೇಶವನ್ನು ವಿಭಜಿಸುತ್ತಿದ್ದಾರೆ. ದುರದೃಷ್ಟವಶಾತ್ ಇದನ್ನು ಜ್ಯಾತ್ಯಾತೀತತೆ ಎಂದು ಕರೆಯಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಸ್ಸಾಂನ ತಮುಲ್ಪರದಲ್ಲಿ ನಡೆದ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಜಾತ್ಯಾತೀತತೆ ಮತ್ತು ಕೋಮುವಾದದ ಆಟಗಳು ದೇಶಕ್ಕೆ ದೊಡ್ಡ ಹಾನಿ ಮಾಡಿದೆ. ನಾವು ಎಲ್ಲಾ ಜನರಿಗಾಗಿ ಕೆಲಸ ಮಾಡಿದರೆ ಅದನ್ನು ಕೋಮುವಾದ ಎನ್ನಲಾಗುತ್ತದೆ. ಆದರೆ, ಅವರು ದೇಶ ವಿಭಜಿಸುತ್ತಿದ್ದರೆ, ಅದನ್ನು ಜ್ಯಾತ್ಯಾತೀತತೆ ಎನ್ನುತ್ತಾರೆ ಎಂದು ಹರಿಹಾಯ್ದರು.
Addressing a rally in Tamulpur. Watch. https://t.co/sBxRPPVF2c
— Narendra Modi (@narendramodi) April 3, 2021
ಭಾರತ ತನ್ನ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದೆ. ಈ ಬಾರಿ ನೀವು ಚಲಾಯಿಸುವ ಮತಗಳು ನಾವು 100 ವರ್ಷದ ಸ್ವಾತಂತ್ರ ಆಚರಿಸುವಾಗ ಅಸ್ಸಾಂ ಎಷ್ಟು ಮುಂದಿದೆ ಎಂಬುದನ್ನು ನಿರ್ಧರಿಸುತ್ತದೆ ಎಂದು ಸ್ಪಷ್ಟಪಡಿಸುತ್ತದೆ ಎಂದರು.
ಕೇಂದ್ರ ಬಜೆಟ್ನಲ್ಲಿ ಅಸ್ಸಾಂನಲ್ಲಿ ಟೀ ಗಾರ್ಡನ್ ರೂಪಿಸಲು 1,000 ಕೋಟಿ ಮೀಸಲಿಡಲಾಗಿದೆ, ಸ್ವಾತಂತ್ರ್ಯ ಬಂದ ಬಳಿಕ ಮೊದಲ ಬಾರಿ ಟೀ ಗಾರ್ಡನ್ಗೆ 1,000 ಕೋಟಿ ಹಣ ಮೀಸಲಿಡಲಾಗಿದೆ ಎಂದು ಅವರು ತಿಳಿಸಿದರು
ಎಲ್ಲರ ಜೊತೆಯಲ್ಲಿ ಎಲ್ಲರ ಅಭಿವೃದ್ಧಿ ಎಲ್ಲರ ವಿಶ್ವಾಸ ಎಂಬುದು ನಮ್ಮ ಮಂತ್ರವಾಗಿದೆ. ಅಸ್ಸಾಂನ ಒಪ್ಪಂದವನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲು ಕೇಂದ್ರವು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಅಸ್ಸಾಂನ ಉಗ್ರರಿಗೆ ಶರಣಾಗುವಂತೆ ಮನವಿ ಮಾಡಿದರು. ಇದುವರೆಗೂ ಯಾರು ಶರಣಾಗಿಲ್ಲ ಅವರು ಶರಣಾಗಿ ಮುಖ್ಯವಾಹಿನಿಗೆ ಬಂದು ಆತ್ಮನಿರ್ಭರ್ ಅಸ್ಸಾಂ ರೂಪಿಸುವ ಅಗತ್ಯವಿದೆ. ನಿಮ್ಮ ಮಕ್ಕಳ ಕನಸನ್ನು ಈಡೇರಿಸುವುದಾಗಿ ಅಸ್ಸಾಂ ತಾಯಂದಿರು ಮತ್ತು ಸಹೋದರಿಯರಿಗೆ ನಾನು ಭರವಸೆ ನೀಡುತ್ತೇನೆ. ಬಂದೂಕು ಹೊತ್ತು ಅವರು ಕಾಡಿನಲ್ಲಿ ಜೀವನ ಕಳೆಯಬೇಕಿಲ್ಲ. ಯಾರದೋ ಗುಂಡಿಗೆ ಬಲಿಯಾಗಬೇಕಿಲ್ಲ ಇದಕ್ಕೆ ಎನ್ಡಿಎ ಸರ್ಕಾರ ಬದ್ಧವಾಗಿದೆ ಎಂದರು.
ಇದನ್ನು ಓದಿ: ಯುಎಸ್ ಕ್ಯಾಪಿಟಲ್ ದಾಳಿ: ಪೊಲೀಸ್ ಅಧಿಕಾರಿ ಸಾವು
ಕಳೆದ ಐದು ವರ್ಷಗಳಲ್ಲಿ ಭೂಪೇನ್ ಹಜರಿಕಾ ಸೇತು, ಬೋಗಿ ಬೀಲ್ ಸೇತುವೆ ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ ಅರ್ಧ ಡಜನ್ ಸೇತುವೆ ನಿರ್ಮಾಣ ಮಾಡಲಾಗಿದೆ. ಪ್ರತಿಯೊಂದು ಯೋಜನೆ ರೂಪಿಸಿದಾಗಲೆಲ್ಲಾ ಅವು ಎಲ್ಲಾ ವರ್ಗದವರನ್ನು ತಲುಪಬೇಕು ಎಂಬುದು ನಮ್ಮ ಉದ್ದೇಶ ಎಂದರು
ಜನರು ಕಾಂಗ್ರೆಸ್ ಸುಳ್ಳುಗಳನ್ನು ತಿರಸ್ಕರಿಸಿದ್ದಾರೆ ಅಲ್ಲದೇ ಈ ಬಾರಿ ಅಸ್ಸಾಂನಲ್ಲಿ ಎನ್ಡಿಎ ಸರ್ಕಾರ ಜನರು ಆದೇಶ ನೀಡಲು ನಿರ್ಧರಿಸಿದ್ದಾರೆ ಎಂದು ನನ್ನ ರಾಜಕೀಯ ಅನುಭವದ ಆಧಾರದ ಮೇಲೆ ನಾನು ಹೇಳಬಲ್ಲೆ ಎಂದರು.