- News18 Kannada
- Last Updated: April 27, 2021, 6:09 PM IST
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡುವ ಮೂಲಕ ಚರ್ಚೆಯಲ್ಲಿದ್ದ ಪ್ರಶಾಂತ್ ಸಂಬರಗಿ ಸದ್ಯ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಯಾಗಿದ್ದಾರೆ. ಕನ್ನಡ ಬಿಗ್ ಬಾಸ್ ಮನೆಗೆ ಹೋದಾಗಿನಿಂದಲೂ ಒಂದಲ್ಲಾ ಒಂದು ವಿಷಯಕ್ಕೆ ಮನೆಯಲ್ಲಿರುವ ಸಹ ಸ್ಪರ್ಧಿಗಳೊಂದಿಗೆ ಜಗಳವಾಡುತ್ತಾ, ವೈಯಕ್ತಿ ವಿಷಯಗಳ ಕುರಿತಾಗಿ ಕಮೆಂಟ್ ಮಾಡುತ್ತಾ ಇತರೆ ಸ್ಪರ್ಧಿಗಳ ಬಳಿ ಕ್ಷಮೆ ಕೇಳುತ್ತಾ ತನ್ನದೇ ಆದ ರೀತಿಯಲ್ಲಿ ಆಟವಾಡುತ್ತಾ ಇದ್ದಾರೆ. ಬಿಗ್ ಬಾಸ್ 8 ಆರಂಭವಾಗಿ 8 ವಾರಗಳಾಗಿದ್ದು, ನಾಮಿನೇಟ್ ಆದ ಪ್ರತಿ ವಾರವೂ ಎಲಿಮಿನೇಷನ್ನಿಂದ ಪಾರಾಗುತ್ತಾ ಬಂದಿದ್ದಾರೆ. ಮನೆಯಲ್ಲಿ ಆಗಾಗ ತುಪ್ಪ ಹಾಗೂ ಮೊಟ್ಟೆ ತಿನ್ನುವ ವಿಷಯದಿಂದಾಗಿ ವಾಕ್ಸಮರ ನಡೆದು ಮನೆಯಲ್ಲಿ ಚರ್ಚೆಯ ವಿಷಯವಾಗಿರುವ ಪ್ರಶಾಂತ್ ಸಂಬರಗಿ ವಿರುದ್ಧ ಮೆನಯಲ್ಲಿ ಹಲವರಿಗೆ ಅಸಮಾಧಾನವಿದೆ. ಅದರಲ್ಲೂ ಪ್ರಶಾಂತ್ ಮಾತನಾಡುವ ಬರದಲ್ಲಿ ಸಹ ಸ್ಪರ್ಧಿಗಳ ವೈಯಕ್ತಿಕ ವಿಷಯಗಳ ಬಗ್ಗೆ ಮಾಡಿವ ಕಮೆಂಟ್ ವಿಷಯಕಂತೂ ಮನೆಯ ಸ್ಪರ್ಧಿಗಳ ಜತೆಗೆ ಬಿಗ್ ಬಾಸ್ ವೀಕ್ಷಕರಿಗೂ ಬೇಸರವಿದೆ.
ಮನೆಯಲ್ಲಿ ಮೊಟ್ಟೆ ತಿಂದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ವಾಕ್ಸಮರದಲ್ಲಿ ಪ್ರಶಾಂತ್ ಸಂಬರಗಿ ನಿಧಿ ಸುಬ್ಬಯ್ಯ ಅವರ ಚರಿತ್ರೆಯ ಬಗ್ಗೆ ಹೇಳುತ್ತೇನೆ ಎಂದು ಹೇಳಿದ್ದರು. ಈ ವಿಷಯದಿಂದ ನೊಂದು ಕಣ್ಣೀರಿಟ್ಟಿದ್ದ ನಿಧಿ ಸುಬ್ಬಯ್ಯ ಅವರಿಗೆ ಮನೆಯವರು ಸಮಾಧಾನಪಡಿಸಿದ್ದರು. ಅಲ್ಲದೆ ನಿಧಿ ಬಳಿ ಕ್ಷಮೆ ಕೇಳುವಂತೆಯೂ ಹೇಳಿದ್ದರು.
ಪ್ರಶಾಂತ್ ಸಂಬರಗಿ
ಬಿಗ್ ಬಾಸ್ ಪ್ರೇಕ್ಷಕರೊಬ್ಬರು ವಾರಾಂತ್ಯದ ಕಾರ್ಯಕ್ರಮದಲ್ಲಿ ಪ್ರಶಾಂತ್ ಸಂಬರಗಿ ಅವರಿಗೆ ಕರೆ ಮಾಡಿ, ಈ ಘಟನೆ ಬಗ್ಗೆ ಮಾತನಾಡಿ, ಪ್ರಶಾಂತ್ ಸಂಬರಗಿ ಮಾಡಿದ್ದು ಸರಿಯಲ್ಲ, ನೀವು ಹೆಣ್ಣು ಮಕ್ಕಳನ್ನೇ ಟಾಗೆರ್ಟ್ ಮಾಡುತ್ತೀರಿ ಏಕೆ ಎಂದು ಪ್ರಶ್ನಿಸಿದ್ದರು. ನನಗೆ ಸ್ತ್ರೀ ವಿರೋಧ ಪಟ್ಟ ಕಟ್ಟಬೇಡಿ ಎಂದು ಮನವಿ ಮಾಡಿದ್ದ ಸಂಬರಗಿಯವರನ್ನು ನಂತರ ಕಳಪೆ ಆಟಗಾರ ಎಂದು ನಿರ್ಧರಿಸಲಾಯಿತು. ಈ ವಾರ ಕಳಪೆ ಪ್ರದರ್ಶನ ನೀಡಿದ ಕಾರಣಕ್ಕೆ ಪ್ರಶಾಂತ್ ಹಾಗೂ ನಿಧಿ ಅವರನ್ನು ಜೈಲಿನಲ್ಲಿ ಒಟ್ಟಿಗೆ ಇರಿಸಲಾಗಿತ್ತು. ಆಗ ಪ್ರಶಾಂತ್ ಸಂಬರಗಿ ನಟಿ ನಿಧಿ ಅವರ ಬಳಿ ಕ್ಷಮೆ ಯಾಚಿಸುತ್ತಾರೆ.
View this post on Instagram
A post shared by Parameshwar Gundkal (@parameshwargundkal)
ಮೊಟ್ಟೆ ವಿಷಯ ತಣ್ಣಗಾಗುತ್ತಿದ್ದಂತೆಯೇ ಪ್ರಶಾಂತ್ ಸಂಬರಗಿ ಮನೆಯಲ್ಲಿ ಮತ್ತೆ ಹೊಸದಾಗಿ ಜಗಳ ಆರಂಭಿಸಿದ್ದಾರೆ. ಯಾವ ಸ್ಥಾನಕ್ಕೆ ಯಾರು ಯೋಗ್ಯ ಟಾಸ್ಕ್ನಲ್ಲಿ ಮನೆಯಲ್ಲಿರುವ ಸ್ಪರ್ಧಿಗಳು ಒಮ್ಮತದಿಂದ 1-12ರಲ್ಲಿ ಯಾವ ಸ್ಥಾನಕ್ಕೆ ಯಾರು ಯೋಗ್ಯ ಎಂದು ನಿರ್ಧರಿಸಬೇಕು. ಪ್ರಶಾಂತ್ ಅವರಿಗೆ ಈ ಟಾಸ್ಕ್ನಲ್ಲಿ ಇತರೆ ಸ್ಪರ್ಧಿಗಳು 5ನೇ ಸ್ಥಾನ ನೀಡುತ್ತಾರೆ. ಈ ವಿಷಯವಾಗಿಯೇ ಪ್ರಶಾಂತ್ ಮಂಜು ಪಾವಗಡ ಹಾಗೂ ಅವರಿಂದ್ ಜತೆ ವಾಕ್ಸಮರಕ್ಕೆ ಇಳಿಯುತ್ತಾರೆ.
ಪ್ರಶಾಂತ್ ಸಂಬರಗಿ ಅವರಿಗೆ ಯಾರೆಲ್ಲ ಸೇರಿ 5ನೇ ಸ್ಥಾನ ಕೊಟ್ಟರು. ನಂತರ ಅಲ್ಲಿ ನಡೆದ ಮಾತುಕತೆಯಾದರೂ ಏನು..? ಪ್ರಶಾಂತ್ ಸಂಬರಗಿ, ಮಂಜು ಪಾವಗಡ ಹಾಗೂ ಅರವಿಂದ್ ನಡುವೆ ವಾಕ್ಸಮರ ನಡೆಯಲು ನಿಖರ ಕಾರಣ ಏನೆಂದು ತಿಳಿಯಲು ಇಂದಿನ ಬಿಗ್ ಬಾಸ್ ಸಂಚಿಕೆಯನ್ನು ನೋಡಬೇಕು.
ಇದನ್ನೂ ಓದಿ: Kavyashree Gowda: ತುಂಡುಡುಗೆ ತೊಟ್ಟು ಮಾಡರ್ನ್ ಲುಕ್ನಲ್ಲಿ ಮಿಂಚಿದ ಮಂಗಳ ಗೌರಿ
ಇನ್ನು ರಾಜೀವ್ ಅವರು ಮನೆಯಿಂದ ಹೊರ ನಡೆದ ನಂತರ ಬಿಗ್ ಬಾಸ್ ಮನೆಯಲ್ಲೂ ಮೂರು ಗುಂಪುಗಳಾಗಿವೆ. ರಾಜೀವ್ ಎಲಿಮಿನೇಟ್ ಆದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲೂ ನೆಟ್ಟಿಗರು ಚರ್ಚೆ ಆರಂಭಿಸಿದ್ದಾರೆ. ಕಳೆದ ಭಾನುವಾರದಿಂದ ನೆಟ್ಟಿಗರು ಬಿಗ್ ಬಾಸ್ ಮನೆಯಲ್ಲಿ ಕಳಪೆ ಪ್ರದರ್ಶನ ತೋರುವ ಸ್ಪರ್ಧಿಗಳು ಇರುವಾಗ ರಾಜೀವ್ನಂತಹ ಉತ್ತಮ ಆಟಗಾರ ಮನೆಯಿಂದ ಹೊರ ಬರಬಾರದಿತ್ತು ಎನ್ನುತ್ತಿದ್ದಾರೆ.