ಭಾಷೆಯನ್ನು ಆಯ್ಕೆಮಾಡಿ :

ಕನ್ನಡ (Kannada)

west-bengalASSEMBLY ELECTIONS 2021

292/292 SEATS (147 SEATS TO WIN)

Alliance TMCBJPLEFT+OTH
Wins
+
Leads
2147611
+/- 2015

292/292 SEATS

(147 SEATS TO WIN)

tamil-naduASSEMBLY ELECTIONS 2021

234/234 SEATS (118 SEATS TO WIN)

Alliance DMK+AIADMK+MNM+AMMK+OTH
Wins
+
Leads
15975000
+/- 2015

234/234 SEATS

(118 SEATS TO WIN)

keralaASSEMBLY ELECTIONS 2021

140/140 SEATS (71 SEATS TO WIN)

Alliance LDFUDFBJP+OTH
Wins
+
Leads
994100
+/- 2015

140/140 SEATS

(71 SEATS TO WIN)

assamASSEMBLY ELECTIONS 2021

126/126 SEATS (64 SEATS TO WIN)

Alliance BJP+INC+OTH
Wins
+
Leads
75501
+/- 2015

126/126 SEATS

(64 SEATS TO WIN)

puducherryASSEMBLY ELECTIONS 2021

30/30 SEATS (16 SEATS TO WIN)

Alliance BJP+INC+OTH
Wins
+
Leads
1695
+/- 2015

30/30 SEATS

(16 SEATS TO WIN)

ಕೊರೋನಾ ಹೆಚ್ಚಳ ಹಿನ್ನೆಲೆ, ದಿಢೀರ್ ಮುಸ್ಲಿಮರ ಸಭೆ ನಡೆಸಿದ ತುಮಕೂರು ಜಿಲ್ಲಾಧಿಕಾರಿ

ಕೊರೋನಾ ಪ್ರಕರಣಗಳು ಅತಿ ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ತುಮಕೂರು ಒಂದಾಗಿದೆ. ಹಬ್ಬ ಹರಿದಿನಗಳಲ್ಲಿ ಇನ್ನೂ ಅಪಾಯ ಹೆಚ್ಚುವುದರಿಂದ ರಂಜಾನ್ ಹಬ್ಬದಂದು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದರ ಸಂಬಂಧ ಜಿಲ್ಲಾಧಿಕಾರಿ ನಿನ್ನೆ ಮುಸ್ಲಿಮರ ಸಭೆ ನಡೆಸಿದರು.

ತುಮಕೂರು: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ನಿಯಂತ್ರಣಕ್ಕಾಗಿ ಎಲ್ಲಾ ಸಮುದಾಯದವರ ಸಹಭಾಗಿತ್ವ ಮತ್ತು ಸಹಕಾರ ಅತ್ಯವಶ್ಯಕವಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕೋವಿಡ್ ನಿಯಂತ್ರಣ ಸಂಬoಧ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ಒಂದಾಗಿರುವ ತುಮಕೂರಿನಲ್ಲಿಯೂ ದಿನೇ ದಿನೇ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.


ರಂಜಾನ್ ಹಬ್ಬದಲ್ಲಿ ಮುಸ್ಲಿಂ ಬಾಂಧವರು ಕೊರೋನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್ ಹಾಕಿಕೊಳ್ಳುವುದು ಮತ್ತು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವಯಸ್ಸಾದವರು ಅನವಶ್ಯಕವಾಗಿ ಹೊರಗಡೆ ಬರಬಾರದು. ರಂಜಾನ್ ಸಮಯದಲ್ಲಿ ಉಪವಾಸದ ಆಚರಣೆ ರೂಢಿಯಲ್ಲಿದ್ದು, ಈ ಸಂದರ್ಭದಲ್ಲೂ ಲಸಿಕೆ ಹಾಕಿಸಿಕೊಳ್ಳಲಿಚ್ಛಿಸುವವರಿಗೆ ಲಸಿಕೆ ಹಾಕಿಸಬೇಕು. ಈ ನಿಟ್ಟಿನಲ್ಲಿ ಮುಸ್ಲಿಂ ಮುಖಂಡರು ತಮ್ಮ ಸಮುದಾಯದಲ್ಲಿ ಜಾಗೃತಿ ಮೂಡಿಸಿ ಕೋವಿಡ್ ನಿಯಂತ್ರಣಕ್ಕೆ ಕೈಜೋಡಿಸಬೇಕು. ಕೋವಿಡ್ ಲಕ್ಷಣ ಕಂಡು ಬಂದ ತಕ್ಷಣ ಅಂತಹವರನ್ನು ಪರೀಕ್ಷೆಗೊಳಪಡಿಸಿ ಚಿಕಿತ್ಸೆಗೆ ದಾಖಲಿಸಬೇಕಲ್ಲದೆ 45 ವರ್ಷ ಮೇಲ್ಪಟ್ಟವರೆಲ್ಲರಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ಅರಿವು ಮೂಡಿಸಬೇಕು ಎಂದು ಕೋರಿದರು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ ವಂಶಿಕೃಷ್ಣ ಮಾತನಾಡಿ, ಕಳೆದ 2019ನೇ ವರ್ಷದಲ್ಲಿ ಇದೇ ಸಮಯದಲ್ಲಿ ಕೊರೋನಾ ಹರಡಿತ್ತು. ಆ ಸಂದರ್ಭದಲ್ಲೂ ಮುಸ್ಲಿಂ ಬಾಂಧವರು ಕೋವಿಡ್ ನಿಯಂತ್ರಣಕ್ಕೆ ಸಹಕರಿಸಿದ್ದು, ಅದರಂತೆಯೇ ಈ ವರ್ಷವೂ ಸಹಕರಿಸಬೇಕು. ರಂಜಾನ್ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಎಲ್ಲಾ ಮಸೀದಿಗಳಿಗೂ ಇಲಾಖೆಯಿಂದ ರವಾನಿಸಲಾಗುವುದು. ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಹೇಳಿದರು.


ಇದನ್ನೂ ಓದಿ: ಭಾರತದಲ್ಲಿ ವ್ಯಾಕ್ಸಿನ್ ಕ್ರಾಂತಿ, ಮಾಸಿಕ 7 ಕೋಟಿ ಲಸಿಕೆ ತಯಾರಿ: ಡಾ. ಅಶ್ವತ್ಥನಾರಾಯಣ

ಮಾಜಿ ಶಾಸಕ ಶಫಿ ಅಹಮದ್ ಮಾತನಾಡಿ, ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರದ ಮಾರ್ಗಸೂಚಿಯ ಆದೇಶವನ್ನು ಪಾಲಿಸುವಲ್ಲಿ ಸಹಕರಿಸಲಾಗುವುದು. ರಾತ್ರಿ ಸಮಯದಲ್ಲಿ ಮಸೀದಿಗಳಲ್ಲಿ ಪ್ರಾರ್ಥನೆ ಮುಗಿದ ಬಳಿಕ ಮನೆ ಸೇರಲು ಐದುಹತ್ತು ನಿಮಿಷ ವ್ಯತ್ಯಾಸ ಆಗಬಹುದು. ಹಾಗಾಗಿ ಕರ್ಫ್ಯೂ ವೇಳೆಯಲ್ಲಿ ಮನೆ ಸೇರಲು ಕಾಲಾವಕಾಶ ನೀಡಬೇಕು ಎಂದು ಕೇಳಿಕೊಂಡರು.


ತುಮಕೂರು ಜಿಲ್ಲಾ ವಕ್ಪ್ ಸಮಿತಿ ಅಧ್ಯಕ್ಷ ಮುಸ್ತಾಫ್ ಅಹಮದ್ ಮಾತನಾಡಿ, ಕಳೆದ ವರ್ಷದಂತೆ ಈ ವರ್ಷವೂ ಕೋವಿಡ್ ಅಲೆಯಲ್ಲಿ ಸಿಲುಕಿರುವ ಹಿನ್ನೆಲೆಯಲ್ಲಿ ತುಮಕೂರು ನಗರದ 80 ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಒಟ್ಟು 410 ಮಸೀದಿಗಳಿಗೆ ಈಗಾಗಲೇ ಸರ್ಕಾರದ ಮಾರ್ಗಸೂಚಿಗಳನ್ನು ಉರ್ದುಗೆ ಭಾಷಾಂತರ ಮಾಡಿ ಕಳಿಸಿಕೊಡಲಾಗಿದ್ದು, ಪಾಲನೆ ಮಾಡಲಾಗುತ್ತಿದೆ ಎಂದರು.

ಪಾಲಿಕೆ ಸದಸ್ಯ ನಯಾಜ್ ಮಾತನಾಡಿ, ಸುಳ್ಳು ಸುದ್ದಿಯಿಂದಾಗಿ ಲಸಿಕೆ ಹಾಕಿಸಿಕೊಳ್ಳುವವರ ಪ್ರಮಾಣ ಕಡಿಮೆಯಾಗುತ್ತದೆ. ಹಾಗಾಗಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಲಸಿಕೆ ಹಾಕಿಸಿಕೊಳ್ಳುವುದರ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.


ಡಾ. ವಸೀಮ್ ಮಾತನಾಡಿ, ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿಯೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಗೆ ಅವಕಾಶ ಮಾಡಿಕೊಡಬೇಕು. ಇದರಿಂದ ಕೋವಿಡ್ ನಿಯಂತ್ರಣ ಸಾಧ್ಯವಾಗಲಿದೆ ಎಂದು ಸಲಹೆ ನೀಡಿದರು. ಡಾ|| ಅಸ್ಕರ್ ಖಲೀನ್ ಮಾತನಾಡಿ, ರಂಜಾನ್ ಸಮಯದಲ್ಲಿ ಉಪವಾಸ ಇಲ್ಲದವರು ಲಸಿಕೆ ಪಡೆದುಕೊಳ್ಳಬಹುದು. ಉಳಿದವರಿಗೆ ಹಬ್ಬದ ಬಳಿಕ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.


ಇದನ್ನೂ ಓದಿ: ಕೋವಿಡ್ ರೋಗಿಗೆ ಬೆಡ್ ನೀಡದಿದ್ದರೆ ಹುಷಾರ್..! ಖಾಸಗಿ ಆಸ್ಪತ್ರೆಗಳಿಗೆ ಸಚಿವರ ಎಚ್ಚರಿಕೆ


ಮುಖಂಡರ ಸಲಹೆಗಳನ್ನು ಆಲಿಸಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಎಲ್ಲಾ ಮಸೀದಿಗಳಲ್ಲಿಯೂ ಸ್ಕ್ರೀನಿಂಗ್ ವ್ಯವಸ್ಥೆ ಮಾಡಬೇಕು. ಸುಳ್ಳು ಸುದ್ದಿ ಹರಡುವವರ ವಿರುದ್ಧ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಲಸಿಕೆ ಹಾಕಿಸಲು ಹೆಚ್ಚು ಒತ್ತು ಕೊಡಬೇಕು. 100 ಜನ ಒಂದೆಡೆ ಸೇರಿ ಲಸಿಕೆ ಹಾಕಿಸಿಕೊಳ್ಳಲು ಬಯಸಿದರೆ ಆ ಸ್ಥಳಕ್ಕೆ ಆರೋಗ್ಯ ಸಿಬ್ಬಂದಿ ತೆರಳಿ ಲಸಿಕೆ ಹಾಕುವರು. ಲಸಿಕೆ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.


ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ, ಆರ್‌ಸಿಹೆಚ್ ಅಧಿಕಾರಿ ಡಾ ಕೇಶವ್‌ರಾಜ್, ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ ಮೋಹನ್‌ದಾಸ್, ಪಾಲಿಕೆ ಆಯುಕ್ತೆ ರೇಣುಕಾ ಸೇರಿದಂತೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ಮುಸ್ಲಿಂ ಮುಖಂಡರು ಉಪಸ್ಥಿತರಿದ್ದರು.


ವರದಿ: ವಿಠಲ್ ಕುಮಾರ್

Published by: Vijayasarthy SN
First published: April 16, 2021, 11:15 AM IST