ಭಾಷೆಯನ್ನು ಆಯ್ಕೆಮಾಡಿ :

ಕನ್ನಡ (Kannada)

west-bengalASSEMBLY ELECTIONS 2021

292/292 SEATS (147 SEATS TO WIN)

Alliance TMCBJPLEFT+OTH
Wins
+
Leads
2147611
+/- 2015

292/292 SEATS

(147 SEATS TO WIN)

tamil-naduASSEMBLY ELECTIONS 2021

234/234 SEATS (118 SEATS TO WIN)

Alliance DMK+AIADMK+MNM+AMMK+OTH
Wins
+
Leads
15975000
+/- 2015

234/234 SEATS

(118 SEATS TO WIN)

keralaASSEMBLY ELECTIONS 2021

140/140 SEATS (71 SEATS TO WIN)

Alliance LDFUDFBJP+OTH
Wins
+
Leads
994100
+/- 2015

140/140 SEATS

(71 SEATS TO WIN)

assamASSEMBLY ELECTIONS 2021

126/126 SEATS (64 SEATS TO WIN)

Alliance BJP+INC+OTH
Wins
+
Leads
75501
+/- 2015

126/126 SEATS

(64 SEATS TO WIN)

puducherryASSEMBLY ELECTIONS 2021

30/30 SEATS (16 SEATS TO WIN)

Alliance BJP+INC+OTH
Wins
+
Leads
1695
+/- 2015

30/30 SEATS

(16 SEATS TO WIN)

ಕೋವಿಡ್ ರೋಗಿಗೆ ಬೆಡ್ ನೀಡದಿದ್ದರೆ ಹುಷಾರ್..! ಖಾಸಗಿ ಆಸ್ಪತ್ರೆಗಳಿಗೆ ಸಚಿವರ ಎಚ್ಚರಿಕೆ

ಬೆಂಗಳೂರಿನಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ವಿಪರೀತ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಬೆಡ್ಗಳ ಕೊರತೆ ಕಾಡುತ್ತಿದೆ. ಕೆಲ ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳನ್ನ ಅಡ್ಮಿಟ್ ಮಾಡಿಕೊಳ್ಳುತ್ತಿಲ್ಲ. ಇಂಥ ಆಸ್ಪತ್ರೆಗಳಿಗೆ ಸಚಿವ ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು: ಕೋವಿಡ್ ಚಿಕಿತ್ಸೆಯಲ್ಲಿ ಖಾಸಗಿ ಆಸ್ಪತ್ರೆಗಳು ಸ್ಪಂದಿಸುತ್ತಿಲ್ಲ. ಕೋವಿಡ್ ರೋಗಿಗಳಿಗೆ ಬೆಡ್ ನೀಡುತ್ತಿಲ್ಲ. ಖಾಸಗಿ ಆಸ್ಪತ್ರೆಗಳಿಗೆ ನೇರವಾಗಿ ಹೇಳಲು ಬಯಸುತ್ತೇನೆ. ನಿಮ್ಮ ವಿರುದ್ಧ ಕಠಿಣ‌ ಕ್ರಮ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.


ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಳೆದ 15  ದಿನಗಳಲ್ಲಿ ಕೇವಲ 15-20% ಮಾತ್ರ ಬೆಡ್ ನೀಡುತ್ತಿದ್ದಾರೆ. ಕಳೆದ ವರ್ಷದಂತೆ ಖಾಸಗಿ ಆಸ್ಪತ್ರೆ‌ಗಳ ಮೇಲೆ‌ ಗಂಭೀರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಕ್ರಮ‌ ಆಗುವವರೆಗೆ ದಯವಿಟ್ಟು ಕಾಯಬೇಡಿ. ಕೋವಿಡ್ ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನೀಡಿ. ಇಲ್ಲವಾದರೆ ಸರ್ಕಾರ ಸುಮ್ಮನೆ ಇರುವುದಿಲ್ಲ. ಸಾಕಷ್ಟು ಬಾರಿ ನಾನು ಹಾಗೂ ಸಿಎಂ ಯಡಿಯೂರಪ್ಪ ನಿಮಗೆ ಮನವಿ ಮಾಡಿದ್ದೇವೆ. ಈಗಲೂ ಅದೇ ಸೂಚನೆ, ಸಲಹೆ ಹಾಗೂ ಮನವಿಯನ್ನೂ ಮಾಡುತ್ತಿದ್ದೇನೆ. ಖಾಸಗಿ ಆಸ್ಪತ್ರೆಗಳು ಸರ್ಕಾರದ ಜೊತೆ ಸ್ಪಂದಿಸಬೇಕು ಎಂದು ಹೇಳಿದರು.


ಖಾಸಗಿ ಹೋಟೆಲ್‌ಗಳಲ್ಲಿ‌ ಕೋವಿಡ್ ಆಸ್ಪತ್ರೆಗಳನ್ನ ಮಾಡುತ್ತೇವೆ. ಗಂಭೀರ ಸ್ವರೂಪದ ರೋಗಿಗಳಿಗೆ ಆಸ್ಪತ್ರೆಯಲ್ಲಿ ದಾಖಲು‌ ಮಾಡುತ್ತೇವೆ. ರಾಜೀವ್ ಗಾಂಧಿ ಆಸ್ಪತ್ರೆಯನ್ನು ಸಂಪೂರ್ಣ ಐಎಲ್ಐ ಮತ್ತು ಸಾರಿ ಕೇಸ್‌ಗಳಿಗೆ ಮೀಸಲಿರಿಸಲಾಗಿದೆ. ಬೆಂಗಳೂರಿನಲ್ಲಿ ಎಲ್ಲೇ ಐಎಲ್ಐ, ಸಾರಿ ಕೇಸ್ ಇದ್ರೂ ಇದೇ ಆಸ್ಪತ್ರೆಗೆ ಹೋಗಬೇಕು. ಇನ್ನೆರಡು ದಿನಗಳಲ್ಲಿ ವಿಕ್ಟೋರಿಯಾದಲ್ಲಿ 500 ಹಾಸಿಗೆಗಳನ್ನು ಕೋವಿಡ್​ಗೆ ಹೆಚ್ಚುವರಿಯಾಗಿ ಮೀಸಲಿರಿಸಲಾಗುವುದು. ಬೌರಿಂಗ್ ಆಸ್ಪತ್ರೆಯಲ್ಲಿ 300, ಹೊಸ ಆಸ್ಪತ್ರೆ ಚರಕ‌ದಲ್ಲಿ‌ 150, ಘೋಶಾ ಆಸ್ಪತ್ರೆಯಲ್ಲಿ 100 ಹಾಸಿಗೆಗಳನ್ನು ಕೋವಿಡ್​ಗೆ ಮೀಸಲಿರಿಸುತ್ತೇವೆ. ಕೆ ಸಿ ಜನರಲ್ ಆಸ್ಪತ್ರೆಗಳಲ್ಲಿ 100 ಐಸಿಯು ಹಾಸಿಗೆಗಳು, ಸಿ.ವಿ.ರಾಮನ್ ಆಸ್ಪತ್ರೆ, ಜಯನಗರ ಆಸ್ಪತ್ರೆಗಳಲ್ಲೂ ಕೋವಿಡ್​ಗೆ ಹಾಸಿಗೆಗಳನ್ನು ಹೆಚ್ಚಿಸುತ್ತಿದ್ದೇವೆ ಎಂದರು.


ಇದನ್ನೂ ಓದಿ: Bengaluru Coronavirus: ಬೆಂಗಳೂರಿನಲ್ಲಿ ಕೊರೋನಾ ಮರಣ ಮೃದಂಗ; 12 ದಿನದಲ್ಲಿ 322 ಜನ ಸಾವು!

ತಾಂತ್ರಿಕ‌ ಸಲಹಾ ಸಮಿತಿ ವರದಿ:


ತಾಂತ್ರಿಕ‌‌ ಸಲಹಾ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾದ ಎಲ್ಲದರ ಬಗ್ಗೆ ಚರ್ಚಿಸಲಾಗುತ್ತದೆ. ಕೋವಿಡ್ ನಿಯಂತ್ರಣಕ್ಕೆ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂಬ ಸಲಹೆಯನ್ನು ವರದಿ ನೀಡುತ್ತದೆ. ವೈಜ್ಞಾನಿಕವಾಗಿ ನಿಯಂತ್ರಣಾ ಕ್ರಮಗಳನ್ನು ತಿಳಿಸಲಿದೆ. ಸಿಎಂ ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಮಾಡಲಾಗುವುದು ಎಂದು ಸುಧಾಕರ್ ತಿಳಿಸಿದರು.

ಆ್ಯಂಬುಲೆನ್ಸ್ ವಸೂಲು ಮಾಡಿದರೆ ಕ್ರಿಮಿನಲ್ ಕೇಸ್:


ಖಾಸಗಿ ಆ್ಯಂಬುಲೆನ್ಸ್ ದುಡ್ಡು ವಸೂಲಿ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ. ಹೆಣದ ‌ಮೇಲೆ ಶೋಷಣೆ ಸರಿಯಲ್ಲ. ಖಂಡಿತವಾಗಿ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಅಂಥವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಎಚ್ಚರಿಕೆ ನೀಡಿದರು.


ಚಿತಾಗಾರದ ಕೊರತೆ ಇಲ್ಲ:


ಯಲಹಂಕದ ಚಿತಾಗಾರದ ಮುಂದೆ ಹೆಣಗಳ ಸಾಲು ಎಂದು ನೋಡಿದ್ದೆ. ತಕ್ಷಣ ಬಿಬಿಎಂಪಿ ಆಯುಕ್ತರಿಗೆ ಕರೆ ಮಾಡಿ‌ ವಿಚಾರಿಸಿದೆ. ಅಲ್ಲಿ ಒಟ್ಟು 15ಸಾವು ಸಂಭವಿಸಿವೆ, ಆದರೆ‌ ಎಲ್ಲವೂ ಕೋವಿಡ್‌ನಿಂದ ಮೃತಪಟ್ಟಿಲ್ಲ. ಆದರೂ ಒಂದೇ ಚಿತಾಗಾರಕ್ಕೆ ಕಳಿಸಲಾಗಿತ್ತು. ಹೀಗಾಗಿ ಹೆಣಗಳ ಸಾಲು ನೋಡಬೇಕಾಯ್ತು. ಆದರೆ‌ ಯಾವುದೇ ಕೊರತೆ ಇಲ್ಲ ಎಂದರು.


ವರದಿ: ದಶರಥ್ ಸಾವೂರು

Published by: Vijayasarthy SN
First published: April 16, 2021, 10:14 AM IST