ಭಾಷೆಯನ್ನು ಆಯ್ಕೆಮಾಡಿ :

ಕನ್ನಡ (Kannada)

west-bengalASSEMBLY ELECTIONS 2021

292/292 SEATS (147 SEATS TO WIN)

Alliance TMCBJPLEFT+OTH
Wins
+
Leads
2147611
+/- 2015

292/292 SEATS

(147 SEATS TO WIN)

tamil-naduASSEMBLY ELECTIONS 2021

234/234 SEATS (118 SEATS TO WIN)

Alliance DMK+AIADMK+MNM+AMMK+OTH
Wins
+
Leads
15975000
+/- 2015

234/234 SEATS

(118 SEATS TO WIN)

keralaASSEMBLY ELECTIONS 2021

140/140 SEATS (71 SEATS TO WIN)

Alliance LDFUDFBJP+OTH
Wins
+
Leads
994100
+/- 2015

140/140 SEATS

(71 SEATS TO WIN)

assamASSEMBLY ELECTIONS 2021

126/126 SEATS (64 SEATS TO WIN)

Alliance BJP+INC+OTH
Wins
+
Leads
75501
+/- 2015

126/126 SEATS

(64 SEATS TO WIN)

puducherryASSEMBLY ELECTIONS 2021

30/30 SEATS (16 SEATS TO WIN)

Alliance BJP+INC+OTH
Wins
+
Leads
1695
+/- 2015

30/30 SEATS

(16 SEATS TO WIN)

Belagavi Bypoll - ಬೆಳಗಾವಿ ಉಪಸಮರ; ಬಿಜೆಪಿಗೆ ಅನುಕಂಪ ಆಧಾರ; ಕಾಂಗ್ರೆಸ್​ಗೆ ಬೆಲೆ ಏರಿಕೆ ಅಸ್ತ್ರ

ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಅವರ ಪತ್ನಿಯನ್ನು ಕಣಕ್ಕಿಳಿಸಿರುವ ಬಿಜೆಪಿ ಅನುಕಂಪದ ಅಲೆಯನ್ನ ನೆಚ್ಚಿಕೊಂಡಿದೆ. ಕಾಂಗ್ರೆಸ್ ಪಕ್ಷ ಬೆಲೆ ಏರಿಕೆಯ ಅಸ್ತ್ರ ಬಿಟ್ಟು ಜನರನ್ನು ಸೆಳೆದಿದೆ.

ಬೆಳಗಾವಿ ಲೋಕಸಭಾ ಉಪ ಚುನಾವಣೆ ಸಮರ ಇಡೀ ರಾಜ್ಯದ ಗಮನ ಸೆಳೆದಿದೆ. ಮತದಾನಕ್ಕೆ ಒಂದು ದಿನ ಮಾತ್ರ ಬಾಕಿ ಇದೆ. ನಿನ್ನೆ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಕೊನೆಯ ಘಳಿಗೆಯವರೆಗೂ ಕಸರತ್ತು ನಡೆಸಿದರು. ಇವತ್ತು ಕೋವಿಡ್ ಪಾಸಿಟಿವ್ ದೃಢಪಟ್ಟಿರುವ ಮುಖ್ಯಮಂತ್ರಿಗಳು ಕಳೆದ ಮೂರು ದಿನಗಳಿಂದ ಅನಾರೋಗ್ಯದ ನಡುವೆಯೂ ಕ್ಷೇತ್ರದಲ್ಲಿ ಬೀಡುಬಿಟ್ಟು ಪ್ರಚಾರ ನಡೆಸಿದ್ದರು. ಕಾಂಗ್ರೇಸ್ ನಾಯಕರು ಪಟ್ಟು ಬಿಡದೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸತತ ಪ್ರಚಾರ ನಡೆಸಿ ಮತದಾರರನ್ನ ಸೆಳೆಯಲು ಮುಂದಾಗಿದ್ದರು. ನಾಳೆ ಮತದಾನ ಇದ್ದು, ಜನತಾ ತೀರ್ಪು ಏನು ಎಂಬುದು ಕುತೂಹಲ ಮೂಡಿಸಿದೆ.


ಅನುಕಂಪದ ಅಲೆಯನ್ನೇ ನಂಬಿಕೊಂಡಿರುವ ಬಿಜೆಪಿ ನಾಯಕರು ಹೋದಲೆಲ್ಲಾ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಾಧನೆ ಜೊತೆಗೆ ಸುರೇಶ್ ಅಂಗಡಿ ಕುಟುಂಬದ ಪರ ಅನುಕಂಪದ ಮಾತುಗಳನ್ನೆ ಹೇಳಿಕೊಂಡು ಮತ ಯಾಚನೆ ಮಾಡುತ್ತಿದ್ದಾರೆ. ದೇಶದಲ್ಲಿ ಮೋದಿ ಸರ್ಕಾರ ಬಂದಾಗಿನಿಂದ ಎಲ್ಲಿಲ್ಲದ ಬದಲಾವಣೆ ಆಗಿದೆ. ಸುರೇಶ್ ಅಂಗಡಿ ಕ್ಷೇತ್ರದಲ್ಲಿ ಅರ್ಧಕ್ಕೆ ಬಿಟ್ಟು ಹೋಗಿರುವ ಕೆಲಸ ಆಗಬೇಕು ಎಂದ್ರೆ ಬಿಜೆಪಿ ಅಭ್ಯರ್ಥಿಯನ್ನ ಗೆಲ್ಲಿಸಬೇಕು ಎನ್ನುತ್ತಿದೆ. ಆದ್ರೆ ಬಲೆ ಏರಿಕೆ ಬಗ್ಗೆ ಮಾತ್ರ ತುಟಿ ಬಿಡುತ್ತಿಲ್ಲ.


ಸದ್ಯ ಉಪ ಚುನಾವಣೆಯನ್ನ ಸಿರಿಯಸ್‌ ಆಗಿ ತೆಗೆದುಕೊಂಡಿರುವ ಕಾಂಗ್ರೇಸ್ ಈ ಉಪ ಚುನಾವಣೆ ರಾಜ್ಯದ ದಿಕ್ಕನ್ನೇ ಬದಲಿಸಲಿದೆ ಎನ್ನುವ ನಿಟ್ಟಿನಲ್ಲಿ ನೋಡುತ್ತಿದೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನೆ ಮುಂದಿಟ್ಟುಕೊಂಡಿರುವ ಕಾಂಗ್ರೇಸ್ ಎಲ್ಲೆಡೆಯೂ ವೈಯಕ್ತಿಕ ಟೀಕೆ ಟಿಪ್ಪಣಿಗಳನ್ನ ಮಾಡದೆ ನೇರ ಬೆಲೆ ಏರಿಕೆ ವಿಚಾರವನ್ನೇ ಪ್ರಮುಖ ಅಸ್ತ್ರವಾಗಿಸಿಕೊಂಡು ಪ್ರಚಾರ ನಡೆಸುತ್ತಿದೆ. ಮೋದಿ ಸರ್ಕಾರ ಬರುವ ಮುನ್ನ ತೈಲ ಬೆಲೆ, ರಸಗೊಬ್ಬರ, ದಿನಬಳಕೆಯ ವಸ್ತುಗಳಿಗೆ ಇದ್ದ ರೇಟ್, ಹಾಗೂ ಮೋದಿ ಸರ್ಕಾರ ಬಂದ ಏಳೇ ವರ್ಷಗಳಲ್ಲಿ ದುಪ್ಪಟ್ಟು ಆಗಿರುವ ಪ್ರಮುಖ ವಿಚಾರವನ್ನೆ ಇಡೀ ಚುನಾವಣಾ ಪ್ರಚಾರದಲ್ಲಿ ಪ್ರಮುಖವಾಗಿ ಬಳಸಿಕೊಂಡಿದೆ. ನಮಗೆ ಮೋದಿಯವರು ಕೊಟ್ಟ ಅಚ್ಛೇ ದಿನಗಳು ಬೇಡ. ನಮಗೆ ನಮ್ಮ ಹಳೆಯ ಕೆಟ್ಟ ದಿನಗಳನ್ನ ವಾಪಸ್ ಕೊಟ್ಟು ಬಿಡಿ (ಅಚ್ಚೆ ನಹಿ ಚಾಹಿಯೆ ಬುರೆ ದಿನ್ ವಾಪಸ್ ದೇದೊ ಮೋದಿಜಿ) ಎನ್ನುವ ಘೋಷ ವಾಕ್ಯವನ್ನು ಕ್ಷೇತ್ರದಲ್ಲಿ ಬಳಸಿಕೊಳ್ಳಲಾಗುತ್ತಿದೆ.


ಇದನ್ನೂ ಓದಿ: ಪಾಕಿಸ್ತಾನದಲ್ಲಿ ಫೇಸ್​ಬುಕ್, ವಾಟ್ಸಾಪ್ ಸೇರಿ ಎಲ್ಲಾ ಸೋಷಿಯಲ್ ಮೀಡಿಯಾಗಳಿಗೆ ತಾತ್ಕಾಲಿಕ ನಿಷೇಧ

ಬಿಜೆಪಿಗೆ ತಲೆನೋವಾದ ಬೆಲೆ ಏರಿಕೆ:


ಬಿಜೆಪಿ ಬೆಳಗಾವಿ ಲೋಕಸಭಾ ಕ್ಷೇತ್ರವನ್ನ ಆರಾಮವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರ ಹಾಕಿತ್ತು. ಅದರಲ್ಲೂ ಅಂಗಡಿ ಕುಟುಂಬಕ್ಕೆ ಜನ ಅನುಕಂಪದ ಆಧಾರದ ಮೇಲೆ ಮತ ನೀಡುತ್ತಾರೆ ಎಂದು ಲೆಕ್ಕಾಚಾರ ಹಾಕಿತ್ತು. ಆದ್ರೆ ಕಾಂಗ್ರೆಸ್​ನಿಂದ ಸತೀಶ್ ಅಖಾಡಕ್ಕೆ ಇಳಿದ ಬಳಿಕ ಎಲ್ಲಾ ಲೆಕ್ಕಾಚಾರ ಉಲ್ಟಾ ಆಗಿದೆ. ಸತೀಶ್ ಜಾರಕಿಹೋಳಿ ಕೂಡ ಪ್ರಭಾವಿ ವ್ಯಕ್ತಿ, ಜೊತೆಗೆ ರಾಜಕೀಯ ಹಿಡಿತ ಹೊಂದಿದ್ದಾರೆ. ಬೇರೆ ಯಾವುದೆ ವಿಚಾರಗಳನ್ನ ಪ್ರಸ್ತಾಪಿಸದೆ ನೇರವಾಗಿ ಬೆಲೆ ಏರಿಕೆಯನ್ನೆ ಪ್ರಮುಖ ಅಸ್ತ್ರವಾಗಿಸಿಕೊಂಡಕೊಂಡ ಹಿನ್ನಲೆ ಜನ ಕಾಂಗ್ರೆಸ್​ನತ್ತ ಹೆಚ್ಚಿನ ಒಲವು ತೋರಿದ್ದಾರೆ ಎನ್ನಲಾಗಿದೆ. ಸದ್ಯ ಬೆಲೆ ಏರಿಕೆಗೆ ಬಿಜೆಪಿ ಯಾವುದೆ ಉತ್ತರ ನೀಡುತ್ತಿಲ್ಲ. ಹಾಗಾಗಿ ಬೆಲೆ ಏರಿಕೆ ಅಸ್ತ್ರ ಬಿಜೆಪಿಗೆ ತಲೆ ನೋವಾಗಿ ಪರಿಣಮಿಸಿದೆ.

ಒಟ್ಟಿನಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಿನ್ನೆ ಬಹಿರಂಗ ಪ್ರಚಾರ ಮುಕ್ತಾಯವಾಗಿದೆ. ಆಡಳಿತ ವಿರೋಧಿ ಅಲೆ ಬಿಜೆಪಿಯನ್ನ ಕಾಡುತ್ತಿದ್ದರೆ, ಬೆಲೆ ಏರಿಕೆ ಅಸ್ತ್ರವನ್ನ ನಂಬಿರುವ ಕಾಂಗ್ರೆಸ್​ಗೆ ಇದು ಎಷ್ಟರಮಟ್ಟಿಗೆ ಲಾಭ ಕೊಡುತ್ತೆ ಅನ್ನೊದು ಕಾದು ನೋಡಬೇಕು. ನಾಳೆ ಮತದಾರ ಏನು ನಿರ್ಧರಿಸುತ್ತಾನೆ ಎಂದು ತಿಳಿಯಲು ಮೇ 2ರವರೆಗೆ ಕಾಯಬೇಕಾಗುತ್ತದೆ.


ವರದಿ: ಲೋಹಿತ್ ಶಿರೋಳ

Published by: Vijayasarthy SN
First published: April 16, 2021, 3:19 PM IST