ಭಾಷೆಯನ್ನು ಆಯ್ಕೆಮಾಡಿ :

ಕನ್ನಡ (Kannada)

west-bengalASSEMBLY ELECTIONS 2021

292/292 SEATS (147 SEATS TO WIN)

Alliance TMCBJPLEFT+OTH
Wins
+
Leads
2147611
+/- 2015

292/292 SEATS

(147 SEATS TO WIN)

tamil-naduASSEMBLY ELECTIONS 2021

234/234 SEATS (118 SEATS TO WIN)

Alliance DMK+AIADMK+MNM+AMMK+OTH
Wins
+
Leads
15975000
+/- 2015

234/234 SEATS

(118 SEATS TO WIN)

keralaASSEMBLY ELECTIONS 2021

140/140 SEATS (71 SEATS TO WIN)

Alliance LDFUDFBJP+OTH
Wins
+
Leads
994100
+/- 2015

140/140 SEATS

(71 SEATS TO WIN)

assamASSEMBLY ELECTIONS 2021

126/126 SEATS (64 SEATS TO WIN)

Alliance BJP+INC+OTH
Wins
+
Leads
75501
+/- 2015

126/126 SEATS

(64 SEATS TO WIN)

puducherryASSEMBLY ELECTIONS 2021

30/30 SEATS (16 SEATS TO WIN)

Alliance BJP+INC+OTH
Wins
+
Leads
1695
+/- 2015

30/30 SEATS

(16 SEATS TO WIN)

Coronavirus: ಮುಂದುವರೆದ ಕೊರೋನಾ ಆರ್ಭಟ; ಖಾಸಗಿ ಆಸ್ಪತ್ರೆಗಳಲ್ಲಿ ಸಿಗುತ್ತಿಲ್ಲ ರೆಮ್ಡಿಸ್​ವಿರ್ ಇಂಜೆಕ್ಷನ್​

ಸರ್ಕಾರಿ ಆಸ್ಪತ್ರೆಯಲ್ಲಿ ಈ ಡ್ರಗ್ ಸದ್ಯಕ್ಕೆ ದಾಸ್ತಾನು ಇದೆ. ಆದರೆ ಖಾಸಗಿ ದೊಡ್ಡ ಹಾಗೂ ಸಣ್ಣ ಆಸ್ಪತ್ರೆಗಳಲ್ಲಿ ಎರಡು ದಿನಕ್ಕಾಗುವಷ್ಟು ಇಂಜೆಕ್ಷನ್ ಇಲ್ಲ.  ಸರಬರಾಜು ಮಾಡುವಂತೆ ಖಾಸಗಿ ಆಸ್ಪತ್ರೆ ಸಂಘ (ಫನಾ) ಕಳೆದ ವಾರವೇ ಸರ್ಕಾರಕ್ಕೆ ಮನವಿ ಮಾಡಿದೆ.

ಬೆಂಗಳೂರು(ಆ.16): ರಾಜ್ಯದಲ್ಲಿ ಕೊರೋನಾ ಸೋಂಕು ದಿನೇ ದಿನೇ ತನ್ನ ಆರ್ಭಟ ಹೆಚ್ಚು ಮಾಡಿದೆ. ನಿನ್ನೆ ಸುಮಾರು 15 ಸಾವಿರ ಪ್ರಕರಣಗಳು ಪತ್ತೆಯಾಗಿವೆ. ಆಸ್ಪತ್ರೆಗಳಲ್ಲಿ ಬೆಡ್​ಗಳಿಲ್ಲದೇ ಕೊರೋನಾ ಸೋಂಕಿತರು ಪರದಾಡುತ್ತಿದ್ದಾರೆ. ಈ ನಡುವೆಯೇ ಕೊರೋನಾ ತಡೆಯಲು ಬೇಕಾದ ಇಂಜೆಕ್ಷನ್ ಕೊರತೆ ಕಾಣಿಸುತ್ತಿದೆ. ಹೌದು, ಕೊರೋನಾ ನಿಯಂತ್ರಣಕ್ಕೆ ಬಳಸುತ್ತಿದ್ದ ರೆಮ್ಡಿಸ್​​ವಿರ್​ ಚುಚ್ಚುಮದ್ದು ಈಗ ಖಾಸಗಿ ಆಸ್ಪತ್ರೆಗಳಲ್ಲಿ ಸಿಗುತ್ತಿಲ್ಲ ಎಂದು ತಿಳಿದು ಬಂದಿದೆ.


ದುಡ್ಡು ಕೊಟ್ಟರೂ ಸಹ  ರೆಮ್ಡಿಸ್ ವಿರ್ ಇಂಜೆಕ್ಷನ್ ಹೊರಗಡೆ ಸಿಗುತ್ತಿಲ್ಲ.  ಕಾಳಸಂತೆಯಲ್ಲಿ ಇಂಜೆಕ್ಷನ್ ಬಿಕರಿಯಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ಈ ಆಯ್ಯಂಟಿ ವೈರಲ್ ಡ್ರಗ್ ಇಲ್ಲದೆ ರೋಗಿಗಳು ಪರದಾಡುವಂತಾಗಿದೆ. ಮೂಲ ಬೆಲೆಗಿಂತ ಹತ್ತು ಪಟ್ಟು ಹೆಚ್ಚಿನ ಬೆಲೆಗೆ ರೆಮ್ಡಿಸ್​ವಿರ್​ ಇಂಜೆಕ್ಷನ್​ನ್ನು ಮಾರಾಟ ಮಾಡಲಾಗುತ್ತಿದೆ.

4-5 ಸಾವಿರ ಬೆಲೆಯ ವೈರಲ್ ಡ್ರಗ್​ನ್ನು 20-40 ಸಾವಿರದವರೆಗೆ ಮಾರಾಟ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಇದೇ ಕಾರಣದಿಂದಾಗಿ  ದುಡ್ಡು ಕೊಟ್ಟರೂ ಕೆಲವೊಮ್ಮೆ ಈ ಇಂಜೆಕ್ಷನ್​ ಸಿಗುತ್ತಿಲ್ಲ.


ಇಂಜೆಕ್ಷನ್​ ಬೆಲೆ ಅದೆಷ್ಟೇ ಆದ್ರೂ ಖರೀದಿಸಿ ಜೀವ‌ ಉಳಿಸಿಕೊಳ್ಳಬೇಕು ಎಂದು ಜನರು ಮುಂದಾಗುತ್ತಿದ್ದಾರೆ. ಇದನ್ನೇ ಲಾಭವಾಗಿಸಿಕೊಂಡ ಕೆಲವರು ಪ್ರಾಣಭಯವನ್ನೇ ವ್ಯಾಪಾರ ಮಾಡಿಕೊಂಡು ಕಾಳಸಂತೆಯಲ್ಲಿ ಹತ್ತು ಪಟ್ಟು ಹೆಚ್ಚಿನ ಬೆಲೆಗೆ ಇಂಜೆಕ್ಷನ್​ ಮಾರಾಟ ಮಾಡುತ್ತಿದ್ದಾರೆ.  ಈ ಬಗ್ಗೆ ಕ್ರಮಕೈಗೊಳ್ಳುವಂತೆ ನೊಂದವರು ಪೊಲೀಸ್ ಕಮಿಷನರ್‌ಗೂ ಪತ್ರ‌ ಬರೆದಿದ್ದಾರೆ.



2ನೇ ಕೊರೊನಾ ಕೇಸ್ ಏರಿಕೆ ಹಿನ್ನೆಲೆ, ಇಂಜೆಕ್ಷನ್​ಗೆ  ದಿಢೀರ್ ಬೇಡಿಕೆ ಹೆಚ್ಚಾಗಿದೆ.

ಆಸ್ಪತ್ರೆಗಳಲ್ಲಿ ಬೇಡಿಕೆಯಷ್ಟು ಇಂಜೆಕ್ಷನ್ ಸ್ಟಾಕ್ ಇಲ್ಲದ ಕಾರಣ ಸಂಕಷ್ಟ ಎದುರಿಸುವಂತಾಗಿದೆ. ಈ ಇಂಜೆಕ್ಷನ್​ನ್ನು  ಆಸ್ಪತ್ರೆಗೆ ದಾಖಲು ಮಾಡಿದ ಕೂಡಲೇ ಕೊಡಲೇಬೇಕು. ಎರಡು ದಿನದೊಳಗೆ ಈ ವೈರಲ್ ಡ್ರಗ್ ಕೊಡದೇ ಹೋದಲ್ಲಿ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಈ ಚುಚ್ಚುಮದ್ದು ವಿಶ್ವ ಆರೋಗ್ಯ ಸಂಸ್ಥೆ (WHO) ಯಿಂದ ಪ್ರಮಾಣಿತಗೊಂಡಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಈ ಡ್ರಗ್ ಸದ್ಯಕ್ಕೆ ದಾಸ್ತಾನು ಇದೆ. ಆದರೆ ಖಾಸಗಿ ದೊಡ್ಡ ಹಾಗೂ ಸಣ್ಣ ಆಸ್ಪತ್ರೆಗಳಲ್ಲಿ ಎರಡು ದಿನಕ್ಕಾಗುವಷ್ಟು ಇಂಜೆಕ್ಷನ್ ಇಲ್ಲ.  ಸರಬರಾಜು ಮಾಡುವಂತೆ ಖಾಸಗಿ ಆಸ್ಪತ್ರೆ ಸಂಘ (ಫನಾ) ಕಳೆದ ವಾರವೇ ಸರ್ಕಾರಕ್ಕೆ ಮನವಿ ಮಾಡಿದೆ. ಬೆಂಗಳೂರಿನ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಈ ಇಂಜೆಕ್ಷನ್ ಅಲಭ್ಯವಿದೆ. ಪ್ರತಿ ದಿನ ರೆಮಿಡಿಸ್ ವೈರ್ ಮೂರು ಸಾವಿರ ವೈಲ್ ಬೇಕು.  ಆದರೆ ಈಗ ಶೇ.10ರಷ್ಟು ಇಂಜೆಕ್ಷನ್ ಇಲ್ಲ.


ಬೆಂಗಳೂರಿನ ಖಾಸಗಿ ಆಸ್ಪತ್ರೆಗಳು ಈಗಾಗಲೇ ಮೂರು ಸಾವಿರ ರೋಗಿಗಳಿಂದ ಭರ್ತಿಯಾಗಿವೆ. 5 ದಿನಗಳಲ್ಲಿ 15,000 ವೈಲ್ ಬೇಕಿದೆ ಎಂದು ಫನಾ ಬೇಡಿಕೆ ಇಟ್ಟಿದೆ.

ಖಾಸಗಿ ಇಲ್ಲವೇ ಸರ್ಕಾರ ಉಗ್ರಾಣದಿಂದ ಇಂಜೆಕ್ಷನ್ ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ.

Published by: Latha CG
First published: April 16, 2021, 8:56 AM IST